Vijayananda: ‘ವಿಜಯಾನಂದ’ ಚಿತ್ರ ನೋಡಿದ ಅಭಿಮಾನಿಗಳು ಹೇಳಿದ್ದಿಷ್ಟು
ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನ ಕಥೆಯನ್ನಾಧರಿಸಿ ತೆರೆಗೆ ಬಂದ ಚಿತ್ರ 'ವಿಜಯಾನಂದ'. ಚಿತ್ರ ನೋಡಿದ ಅಭಿಮಾನಿಗಳು ತಮ್ಮ ಅಭಿಪ್ರಾಯನ್ನು ಹಂಚಿಕೊಂಡಿದ್ದಾರೆ.
ಉದ್ಯಮಿ ವಿಜಯ ಸಂಕೇಶ್ವರ (Vijay Sankeshwar) ಅವರ ಜೀವನ ಕಥೆಯನ್ನಾಧರಿಸಿ ಇಂದು (ಡಿ. 9) ತೆರೆಗೆ ಬಂದ ಚಿತ್ರ ‘ವಿಜಯಾನಂದ’ (Vijayananda). ‘ವಿಜಯಾನಂದ’ ಚಿತ್ರ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಬಯೋಪಿಕ್ ಚಿತ್ರವಾಗಿದೆ. ರಿಶಿಕಾ ಶರ್ಮಾ ನಿರ್ದೇಶನ ಮಾಡಿದ್ದು, ನಟ ನಿಹಾಲ್ ರಜಪೂತ್, ನಟಿ ಸಿರಿ ಪ್ರಹ್ಲಾದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರ ಸೇರಿದಂತೆ ರಾಜ್ಯದಲ್ಲಿ 350 ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ‘ವಿಜಯಾನಂದ’ ಬಿಡುಗಡೆಯಾಗಿದೆ. ಚಿತ್ರ ನೋಡಿದ ಫ್ಯಾನ್ಸ್ ತಮ್ಮ ಅಭಿಪ್ರಾಯವನ್ನು ಟಿವಿ 9ನೊಂದಿಗೆ ಹಂಚಿಕೊಂಡಿದ್ದು ಹೀಗೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.