Vijayapura: ಶ್ರೀ ಸಿದ್ದೇಶ್ವರ ಸ್ವಾಮೀಜಿ ಬೇಗ ಚೇತರಿಸಿಕೊಳ್ಳುವಂತಾಗಲು ಬಿಜ್ಜರಗಿ ಶಾಲಾಮಕ್ಕಳಿಂದ ಎಡೆಬಿಡದ ಪ್ರಾರ್ಥನೆ
ಆಶ್ರಮಕ್ಕೆ ಬೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಶ್ರಮದ ಆವರಣದಲ್ಲಿ ಎಲ್ ಇ ಡಿ ಪರದೆ ಅಳವಡಿಸಿ ಸ್ವಾಮೀಜಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ವಿಜಯಪುರ: ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಭಕ್ತರಿಂದ ನಡೆದಾಡುವ ದೇವರೆಂದು ಕರೆಸಿಕೊಳ್ಳುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು (Shri Siddeshwara Swamiji) ಶೀಘ್ರ ಗುಣಮುಖರಾಗಲು ರಾಜ್ಯದೆಲ್ಲೆಡೆ ಪೂಜೆ ಹಾಗೂ ವಿಶೇಷ ಆರಾಧನೆಗಳು ನಡೆಯುತ್ತಿವೆ. ಸ್ವಾಮೀಜಿಯವರ ಸ್ವಗ್ರಾಮ ಬಿಜ್ಜರಗಿಯಲ್ಲಿ (Bijjargi) ಶಾಲಾಮಕ್ಕಳು (school children) ದೇವಸ್ಥಾನದಲ್ಲಿ ಸಾಮೂಹಿಕವಾಗಿ ಶ್ರೀಗಳ ಚೇತರಿಕೆಗೆ ಪ್ರಾರ್ಥಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿದ್ಯಾರ್ಥಿನಿಯರಲ್ಲದೆ, ಗ್ರಾಮದ ಮುಖಂಡರು, ಪಂಚಾಯತ್ ಸದಸ್ಯರು ಸಹ ದೇವರಿಗೆ ಅರಿಕೆ ಮಾಡಿಕೊಳ್ಳುತ್ತಿದ್ದಾರೆ. ಆಶ್ರಮಕ್ಕೆ ಬೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಶ್ರಮದ ಆವರಣದಲ್ಲಿ ಎಲ್ ಇ ಡಿ ಪರದೆ ಅಳವಡಿಸಿ ಸ್ವಾಮೀಜಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ