ಪ್ರತಿಯೊಬ್ಬ ನಾಯಕನೊಂದಿಗೆ ವಿಜಯೇಂದ್ರ ಮುಖಾಮುಖಿಯಾಗಿ ಮಾತಾಡಬೇಕು: ಮುರುಗೇಶ್ ನಿರಾಣಿ
ಪಕ್ಷದ ನಾಯಕರ ಮುನಿಸಿನಿಂದ ಲಕ್ಷಾಂತರ ಕಾರ್ಯಕರ್ತರು ತೊಂದರೆಗೊಳಗಾಗುತ್ತಾರೆ, ಹಿರಿಯ ನಾಯಕರಿಗೇನೂ ಸಮಸ್ಯೆ ಆಗಲ್ಲ, ಬಿಜೆಪಿಯ ಹೋರಾಟ ಇರೋದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ, ಅದು ನಡೆಸುತ್ತಿರುವ ಅಭಿವೃದ್ಧಿ ಶೂನ್ಯ ದುರಾಡಳಿತ ವಿರುದ್ಧ, ಹಾಗಾಗಿ ಬಿಜೆಪಿ ನಾಯಕರು ತಮ್ಮ ನಡುವಿನ ಜಗಳ ತಂಟೆಗಳನ್ನು ನಾಲ್ಕು ಗೋಡೆಗಳ ನಡುವೆ ಬಗೆಹರಿಸಿಕೊಳ್ಳಬೇಕು ಎಂದು ನಿರಾಣಿ ಹೇಳಿದರು.
ಬಾಗಲಕೋಟೆ: ಮಾಜಿ ಸಚಿವ ಮುರುಗೇಶ್ ನಿರಾಣಿ ಯತ್ನಾಳ್ ಬಣದೊಂದಿಗೆ ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ, ಯಾಕೆಂದರೆ ವಿಜಯಪುರ ಶಾಸಕನೊಂದಿಗೆ ಅವರದ್ದು ಎಣ್ಣೆ ಸೀಗೇಕಾಯಿ ಸಂಬಂಧ. ಅದರೆ ಅವರಿಗೂ ವಿಜಯೇಂದ್ರ ಕಾರ್ಯವೈಖರಿಯ ಬಗ್ಗೆ ಅಸಮಾಧಾನವಿದೆ. ಇಂದು ನಗರದಲ್ಲಿ ಮಾಧ್ಯಮದವರೊಡನೆ ಮಾತಾಡಿದ ಅವರು ಪರೋಕ್ಷವಾಗಿ ವಿಜಯೇಂದ್ರ ಕೆಲಸ ಮಾಡುತ್ತಿರುವ ವಿಧಾನವನ್ನು ಟೀಕಿಸಿದರು. ಜನ ಅಪ್ಪನನ್ನು ಇಷ್ಟಪಡುತ್ತಾರೆಂಬ ಕಾರಣಕ್ಕರ ಮಗನನ್ನೂ ಇಷ್ಟಪಡುತ್ತಾರೆ ಅಂತ ಹೇಳಲಾಗದು, ಬೀಳಗಿ ಜನ ತನ್ನನ್ನು ಅಂಗೀಕರಿಸಿದ್ದಾರೆ ಮತ್ತು ತಿರಸ್ಕರಿಸಿದ್ದಾರೆ, ತನ್ನ ಮಗನನ್ನು ಅವರು ಇಷ್ಟಪಟ್ಟಾರು ಅಂತ ಹೇಳಲಾಗಲ್ಲ, ಪಕ್ಷದ ನಾಯಕರ ಆಂತರಿಕ ವೈಮನಸ್ಸುಗಳು ಬೀದಿಗೆ ಬರಬಾರದು, ವಿಜಯೇಂದ್ರ ಅವರು ಪ್ರತಿಯೊಬ್ಬ ನಾಯಕನೊಂದಿಗೆ ಮುಖಾಮುಖಿಯಾಗಿ ಮಾತಾಡಬೇಕು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೊಂದಾಣಿಕೆ ರಾಜಕಾರಣ ಮಾಡಿದ್ದರೆ ಕಾಂಗ್ರೆಸ್ ಸರ್ಕಾರವನ್ನು ಒಂಟಿಗಾಲಲ್ಲಿ ನಿಲ್ಲಿಸೋದು ಸಾಧ್ಯವಿರಲಿಲ್ಲ: ವಿಜಯೇಂದ್ರ