ರಾಜ್ಯಾಧ್ಯಕ್ಷನಾಗಿ ಘೋಷಣೆಯಾದ ನಂತರ ವಿಜಯೇಂದ್ರ ಅವರು ಸುಧಾಕರ್ರನ್ನು ವಿಶ್ವಾಸಕ್ಕೆ ಪಡೆಯಬೇಕು: ಮುನಿರತ್ನ
ಮುನಿಯಪ್ಪ ಮತ್ತು ಸುಧಾಕರ್ ನಡುವೆ ಉತ್ತಮ ಸ್ನೇಹವಿದೆ, ಪರಸ್ಪರ ಅಭಿಮಾನವಿದೆ ಆದರೆ ಸುಧಾಕರ್ ಮಾತ್ರ ಯಾವತ್ತೂ ಕಾಂಗ್ರೆಸ್ ಗೆ ವಾಪಸ್ಸು ಹೋಗಲ್ಲ ಎಂದು ಮುನಿರತ್ನ ಹೇಳಿದರು. ಮುಂಬರುವ ದಿನಗಳಲ್ಲಿ ಅವರು ರಾಜ್ಯ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡಲಿದ್ದಾರೆ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಡಾ ಸುಧಾಕರ್ ಉತ್ತಮ ಒಡನಾಟ ಹೊಂದಿದ್ದಾರೆ ಎಂದು ಶಾಸಕ ಹೇಳಿದರು.
ಬೆಂಗಳೂರು: ಬಹಳ ದಿನಗಳ ನಂತರ ಮಾಧ್ಯಮಗಳ ಜೊತೆ ಮಾತಾಡಿದ ಆರ್ ಅರ್ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ತಮ್ಮ ಜೊತೆಗಾರರಾಗಿದ್ದ ಡಾ ಕೆ ಸುಧಾಕರ್ ಬಗ್ಗೆ ಬಹಳ ಅಭಿಮಾನ ಮತ್ತು ಕಕ್ಕುಲಾತಿಯಿಂದ ಮಾತಾಡಿದರು. ಆಷ್ಟು ಮಾತ್ರ ಅಲ್ಲ, ಬಿವೈ ವಿಜಯೇಂದ್ರ ಬಿಜಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ಬಗ್ಗೆಯೂ ವಿಶ್ವಾಸದಿಂದ ಹೇಳಿದರು. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷನಾಗಿ ಘೋಷಣೆಯಾದ ಬಳಿಕ ಸುಧಾಕರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಲಹೆ ಸೂಚನೆಗಳನ್ನು ಪಡೆಯಬೇಕು, ಸುಧಾಕರ್ ಅನುಭವಿ ರಾಜಕಾರಣಿಯಾಗಿದ್ದಾರೆ ಮತ್ತು ಸಂಸದರೂ ಆಗಿದ್ದಾರೆ ಎಂದು ಮುನಿರತ್ನ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿಯಾದ ಶಾಸಕ ಮುನಿರತ್ನ