ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ 25, ಗ್ರಾಮ ಲೆಕ್ಕಾಧಿಕಾರಿ ಎಕ್ಸಾಂನಲ್ಲಿ 151 ಅಂಕ: ವಿವಾದದ ಬಗ್ಗೆ ಶಂಕರ ಬನ್ನೂರು ಸ್ಪಷ್ಟನೆ

Updated on: Oct 30, 2026 | 12:35 PM

ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ 25 ಪಡೆದು ವಿಎ ಪರೀಕ್ಷೆಯಲ್ಲಿ 151 ಅಂಕಗಳೊಂದಿಗೆ ಟಾಪರ್ ಆಗಿರುವ ಕುರಿತ ಸಂಶಯಗಳಿಗೆ ಹಾವೇರಿಯ ಶಂಕರ ಬನ್ನೂರು ಸ್ಪಷ್ಟನೆ ನೀಡಿದ್ದು, ಯಾವುದೇ ತನಿಖೆಗೂ ಸಿದ್ಧ ಎಂದಿದ್ದಾರೆ. ಕಾನ್ಸ್​​ಟೇಬಲ್​​ ಪರೀಕ್ಷೆಯ ಸಂದರ್ಭ ತನ್ನ ಸಹೋದರಿನಿಗೆ ಅಪಘಾತವಾಗಿತ್ತು. ತನಗೂ ಏಟಾಗಿದ್ದ ಕಾರಣ ಸರಿಯಾಗಿ ಪರೀಕ್ಷೆ ಬರೆಯಲು ಆಗಿರಲಿಲ್ಲ ಎಂದವರು ತಿಳಿಸಿದ್ದಾರೆ.

ಹಾವೇರಿ, ಅಕ್ಟೋಬರ್​​ 30: ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದಾತ ಗ್ರಾಮ ಲೆಕ್ಕಾಧಿಕಾರಿ ಎಕ್ಸಾಂನಲ್ಲಿ 151 ಮಾರ್ಕ್ಸ್​​ ಪಡೆದು ರಾಜ್ಯಕ್ಕೆ ಟಾಪರ್​​ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಆಗ್ರಹ ಸೋಶಿಯಲ್​​ ಮೀಡಿಯಾದಲ್ಲಿ ಕೇಳಿಬಂದಿತ್ತು. ಬಳಿಕ ಈ ಸಂಬಂಧ ತನಿಖೆಗೆ ಕೆಇಎ ಕೂಡ ಆದೇಶಿಸಿತ್ತು. ಈ ವಿಚಾರವಾಗಿ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ಪರೀಕ್ಷಾ ಟಾಪರ್ ಶಂಕರ ಬನ್ನೂರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 45ಕ್ಕೂ ಅಧಿಕ ಪರೀಕ್ಷೆಗಳನ್ನು ತಾನು ಬರೆದಿದ್ದು, ಯಾವುದೇ ತನಿಖೆಗೂ ಸಿದ್ಧನಿದ್ದೇನೆ ಎಂದಿದ್ದಾರೆ. ನಿನ್ನೆ ಪೊಲೀಸರು, ತಹಶೀಲ್ದಾರ್​​ ಅವರು ಕರೆದು ವಿಚಾರಣೆ ಮಾಡಿದ್ದಾರೆ. ನನ್ನ ಎಲ್ಲಾ ಮೂಲ ದಾಖಲೆಗಳನ್ನ ನೀಡಿದ್ದೇನೆ. ಕಾನ್ಸ್​​ಟೇಬಲ್​​ ಪರೀಕ್ಷೆಯ ಸಂದರ್ಭ ತನ್ನ ಸಹೋದರಿನಿಗೆ ಅಪಘಾತವಾಗಿತ್ತು. ತನಗೂ ಏಟಾಗಿದ್ದ ಕಾರಣ ಸರಿಯಾಗಿ ಪರೀಕ್ಷೆ ಬರೆಯಲು ಆಗಿರಲಿಲ್ಲ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Oct 30, 2026 12:33 PM
Loading...
Unable to load recommendations.
Follow Us
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More