‘ನಾವು ಜೋಡೆತ್ತುಗಳು’: ಬಿಗ್ ಬಾಸ್ ಮನೆಯಲ್ಲಿ ದ್ವೇಷ ಮರೆತು ಒಂದಾದ ವಿನಯ್-ಕಾರ್ತಿಕ್
‘ಸಲಾರ್’ ಸಿನಿಮಾದ ಮೊದಲ ಟ್ರೇಲರ್ ರಿಲೀಸ್ ಆಗಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ. ಈಗ ಸಿನಿಮಾದ ಎರಡನೇ ಟ್ರೇಲರ್ ರಿಲೀಸ್ ಆಗಿದೆ. ಇದು ಚಿತ್ರದ ಮೇಲೆ ಇದ್ದ ನಿರೀಕ್ಷೆಯನ್ನು ದ್ವಿಗುಣ ಮಾಡಿದೆ. ಡಿಸೆಂಬರ್ 22ರಂದು ‘ಸಲಾರ್’ ರಿಲೀಸ್ ಆಗಲಿದೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮನಸ್ಥಿತಿ ಯಾವಾಗ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಕಾರಣದಿಂದಲೇ ವೀಕ್ಷಕರಿಗೆ ಅಚ್ಚರಿಗಳು ಎದುರಾಗುತ್ತವೆ. ನಿತ್ಯ ಹೊಸ ಹೊಸ ಟ್ವಿಸ್ಟ್ಗಳು ಪ್ರೇಕ್ಷಕರಿಗಾಗಿ ಕಾಯುತ್ತಿರುತ್ತವೆ. ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಹಾಗೂ ವಿನಯ್ (Vinay Gowda) ಸದಾ ಕಚ್ಚಾಡಿಕೊಳ್ಳುತ್ತಿದ್ದರು. ಈಗ ಇಬ್ಬರೂ ಜೋಡೆತ್ತುಗಳಾಗಿದ್ದಾರೆ. ವಿನಯ್ ಹಾಗೂ ಕಾರ್ತಿಕ್ ಒಂದೇ ಟೀಂ ಸೇರಿದ್ದಾರೆ. ‘ಜೋಡೆತ್ತು ಎಂದರೆ ಜೋಡೆತ್ತು’ ಎಂದು ಹೇಳಿದ್ದಾರೆ ವಿನಯ್. ಕಾರ್ತಿಕ್ ತಮ್ಮ ತಂಡಕ್ಕೆ ಬಂದಿರುವುದಕ್ಕೆ ಅವರಿಗೆ ಖುಷಿ ಆಗಿದೆ. ಜಿಯೋ ಸಿನಿಮಾ ಹಾಗೂ ಕಲರ್ಸ್ ಕನ್ನಡದಲ್ಲಿ ಇಂದು (ಡಿಸೆಂಬರ್ 19) ರಾತ್ರಿ ಈ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 19, 2023 02:57 PM