Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೈ ಮುಟ್ಟಬೇಡ’; ಕಾರ್ತಿಕ್ ಹಾಗೂ ವಿನಯ್ ಮಧ್ಯೆ ದ್ವೇಷದ ಬೆಂಕಿ

‘ಮೈ ಮುಟ್ಟಬೇಡ’; ಕಾರ್ತಿಕ್ ಹಾಗೂ ವಿನಯ್ ಮಧ್ಯೆ ದ್ವೇಷದ ಬೆಂಕಿ

ರಾಜೇಶ್ ದುಗ್ಗುಮನೆ
|

Updated on: Nov 01, 2023 | 10:36 AM

ಒಂದು ತಂಡಕ್ಕೆ ವಿನಯ್ ಕ್ಯಾಪ್ಟನ್ ಆದರೆ, ಮತ್ತೊಂದಕ್ಕೆ ಸಂಗೀತಾ ನಾಯಕಿ. ಟಾಸ್ಕ್ ವೇಳೆ ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಕಿತ್ತಾಟ ನಡೆದಿದೆ. ‘ಮೈ ಮುಟ್ಟಬೇಡ’ ಎಂದು ಕಾರ್ತಿಕ್ ಅವರು ವಿನಯ್​ಗೆ ಎಚ್ಚರಿ ನೀಡಿದ್ದಾರೆ.

ಬಿಗ್ ಬಾಸ್ (Bigg Boss) ಮನೆ ಒಂದೇ ತಿಂಗಳಲ್ಲಿ ರಣರಂಗವಾಗಿ ಬದಲಾಗಿದೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಈ ವಾರ ಭಿನ್ನವಾದ ಟಾಸ್ಕ್​ನ ನೀಡಿದ್ದಾರೆ ಬಿಗ್ ಬಾಸ್. ದೊಡ್ಮನೆಯ ಗಾರ್ಡನ್ ಏರಿಯಾದಲ್ಲಿ ಹಳ್ಳಿಯ ಸೆಟ್ ಹಾಕಲಾಗಿದೆ. ಸ್ಪರ್ಧಿಗಳು ಅಲ್ಲಿಯೇ ವಾಸ ಮಾಡಬೇಕು. ಮನೆಯಲ್ಲಿರುವ ಸ್ಪರ್ಧಿಗಳನ್ನು ಎರಡು ಗುಂಪನ್ನಾಗಿ ಬಿಗ್ ಬಾಸ್ ಮಾಡಿದ್ದು, ಒಂದಕ್ಕೆ ವಿನಯ್(Vinay Gowda)  ಕ್ಯಾಪ್ಟನ್ ಆದರೆ, ಮತ್ತೊಂದಕ್ಕೆ ಸಂಗೀತಾ ನಾಯಕಿ. ಟಾಸ್ಕ್ ವೇಳೆ ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಕಿತ್ತಾಟ ನಡೆದಿದೆ. ‘ಮೈ ಮುಟ್ಟಬೇಡ’ ಎಂದು ಕಾರ್ತಿಕ್ ಅವರು ವಿನಯ್​ಗೆ ಎಚ್ಚರಿ ನೀಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಶೋ ವೀಕ್ಷಿಸಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ