ರಜತ್​​ಗೆ ‘ಮಚ್’ ಬ್ರದರ್ ಎಂದ ವಿನಯ್ ಗೌಡ

Updated on: Jun 10, 2026 | 12:41 PM

ರಜತ್​​ಗೆ ‘ಮಚ್’ ಬ್ರದರ್ ಎಂದ ವಿನಯ್ ಗೌಡ‘ಬಲರಾಮನ ದಿನಗಳು’ ಸಿನಿಮಾದಲ್ಲಿ ವಿನಯ್ ನಟಿಸಿದ್ದಾರೆ.ಈ ಚಿತ್ರದಲ್ಲಿ ವಿನೊಧ್ ಪ್ರಭಾಕರ್ ನಟಿಸಿದ್ದಾರೆ. ಈ ಸಿನಿಮಾ ಗಮನ ಸೆಳೆಯುವ ಭರವಸೆ ಮೂಡಿಸಿದ್ದಾರೆ. ಈ ಚಿತ್ರದ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ವಿನಯ್ ಅವರು ವೈರಲ್ ಆಗಿರೋ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ್ದಾರೆ.

ವಿನಯ್ ಹಾಗೂ ರಜತ್ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಗೆಳೆತನ ಮೂಡಿದೆ. ಇಬ್ಬರೂ ಮಚ್ಚು ಹಿಡಿದು ರೀಲ್ಸ್ ಮಾಡಿ ಸುದ್ದಿ ಆಗಿದ್ದರು. ಇತ್ತೀಚೆಗೆ ನಡೆದ ‘ಬಲರಾಮನ ದಿನಗಳು’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ರಜತ್ ಅವರನ್ನು ವಿನಯ್ ‘ಮಚ್ ಬ್ರದರ್’ ಎಂದು ಕರೆದಿದ್ದಾರೆ. ‘ನಮ್ಮ ಮಚ್ ಬ್ರದರ್ ರಜತ್ ಅವರು ಸುದ್ದಿಗೋಷ್ಠಿಗೆ ಬರಬೇಕಿತ್ತು. ಆದರೆ, ಅವನು ಶೂಟ್​​ನಲ್ಲಿ ಇರೋದ್ರಿ ಬರೋಕೆ ಆಗಿಲ್ಲ’ ಎಂದಿದ್ದಾರೆ. ಬಲರಾಮನ ದಿನಗಳು ಚಿತ್ರಕ್ಕೆ ವಿನೋದ್ ರಾಜ್ ಹೀರೋ. 80ರ ದಶಕದ ಕಥೆ ಸಿನಿಮಾದಲ್ಲಿದ್ದು, ಚಿತ್ರ ಗೆಲ್ಲುತ್ತದೆ ಎಂಬ ಭರವಸೆ ಅವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More