ನಾಮಿನೇಷನ್ ಅಧಿಕಾರವನ್ನು ಸಂಗೀತಾಗೆ ನೀಡಿದ ವಿನಯ್; ಬಿಗ್ ಬಾಸ್​ನಲ್ಲಿ ಅಚ್ಚರಿಯ ಬೆಳವಣಿಗೆ

Updated on: Dec 25, 2023 | 2:56 PM

ಶೈನ್ ಶೆಟ್ಟಿ ಬಂದು ಸಂಗೀತಾ ಹಾಗೂ ವಿನಯ್ ಮಧ್ಯೆ ರಾಜಿ ಮಾಡಿಸಿದ್ದರು. ಇಬ್ಬರೂ ಪರಸ್ಪರ ಹಗ್ ನೀಡಿದ್ದರು. ಈಗ ವಿನಯ್ ಗೌಡ ಅವರು ನಿಜಕ್ಕೂ ಬದಲಾದಂತೆ ಕಾಣುತ್ತಿದೆ.

‘ಬಿಗ್ ಬಾಸ್’ನಲ್ಲಿ ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ (Sangeetha Sringeri) ಮಧ್ಯೆ ಕಿತ್ತಾಟ ನಡೆಯುತ್ತಲೇ ಇತ್ತು. ಆದರೆ, ಶೈನ್ ಶೆಟ್ಟಿ ಬಂದು ಸಂಗೀತಾ ಹಾಗೂ ವಿನಯ್ ಮಧ್ಯೆ ರಾಜಿ ಮಾಡಿಸಿದ್ದರು. ಇಬ್ಬರೂ ಪರಸ್ಪರ ಹಗ್ ನೀಡಿದ್ದರು. ಈಗ ವಿನಯ್ ಗೌಡ ಅವರು ನಿಜಕ್ಕೂ ಬದಲಾದಂತೆ ಕಾಣುತ್ತಿದೆ. ನಾಮಿನೇಷನ್ ಮಾಡುವ ಅಧಿಕಾರವನ್ನು ಒಬ್ಬರಿಗೆ ನೀಡಬೇಕಿತ್ತು. ಈ ವೇಳೆ ವಿನಯ್ ಗೌಡ ಅವರು ಈ ಅಧಿಕಾರವನ್ನು ಸಂಗೀತಾಗೆ ನೀಡಿದ್ದಾರೆ. ಈ ಮೂಲಕ ಅನೇಕರಿಗೆ ಅಚ್ಚರಿ ನೀಡಿದ್ದಾರೆ. ಇಂದು (ಡಿಸೆಂಬರ್ 25) ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Dec 25, 2023 02:55 PM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More