‘ಪೊಲೀಸ್ ಕೇಸ್ ಬಗ್ಗೆ ಈಗ ಗೊತ್ತಾಯ್ತು’: ದೊಡ್ಮನೆಯಿಂದ ಹೊರಬಂದ ವಿನಯ್ಗೆ ಅಚ್ಚರಿ
ಈ ಕೇಸ್ಗಳ ಬಗ್ಗೆ ವಿನಯ್ ಗೌಡ ಅವರಿಗೆ ತಿಳಿದೇ ಇರಲಿಲ್ಲ. ಇಷ್ಟೆಲ್ಲ ಆಗಿದೆ ಎಂಬುದು ಬಿಗ್ ಬಾಸ್ನಿಂದ ಹೊರಬಂದ ನಂತರ ಅವರಿಗೆ ಗೊತ್ತಾಗಿದೆ. ‘ಓಹ್ ಮೈ ಗಾಡ್’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಅವರು 3ನೇ ರನ್ನರ್ಅಪ್ ಆಗಿದ್ದಾರೆ. ಕಾರ್ತಿಕ್ ಮಹೇಶ್ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
‘ಬಿಗ್ ಬಾಸ್ ಕನ್ನಡ’ (Bigg Boss Kannada) ಕಾರ್ಯಕ್ರಮದ ಇದುವರೆಗಿನ ಸೀಸನ್ಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದೇ 10ನೇ ಸೀಸನ್. ಈ ಶೋನಲ್ಲಿ ವಿನಯ್ ಗೌಡ, ವರ್ತೂರು ಸಂತೋಷ್, ತನಿಷಾ ಕುಪ್ಪಂಡ, ಡ್ರೋನ್ ಪ್ರತಾಪ್ (Drone Prathap), ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್ ಮುಂತಾದವರು ಸ್ಪರ್ಧಿಸಿದ್ದರು. ದೊಡ್ಮನೆಯೊಳಗೆ ನಡೆದ ವಿಚಾರಗಳು ಹೊರ ಜಗತ್ತಿನಲ್ಲಿ ಸಾಕಷ್ಟು ಸುದ್ದಿ ಆಗಿದ್ದವು. ಡ್ರೋನ್ ಪ್ರತಾಪ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಯ ಬೆನ್ನಲ್ಲೇ ಪೊಲೀಸರು ಬಿಗ್ ಬಾಸ್ ಮನೆಗೆ ಭೇಟಿ ನೀಡಿದ್ದರು. ತನಿಷಾ ಕುಪ್ಪಂಡ ಅವರು ಜಾತಿ ನಿಂದನೆ ಪದ ಬಳಸಿದ್ದು ಕೂಡ ಪೊಲೀಸ್ ಕೇಸ್ ಆಗಿತ್ತು. ಆದರೆ ಈ ಕೇಸ್ಗಳ ಬಗ್ಗೆ ವಿನಯ್ ಗೌಡ (Vinay Gowda) ಅವರಿಗೆ ತಿಳಿದೇ ಇಲ್ಲ. ಇಷ್ಟೆಲ್ಲ ಆಗಿದೆ ಎಂಬುದು ಬಿಗ್ ಬಾಸ್ನಿಂದ ಹೊರಬಂದ ನಂತರ ಅವರಿಗೆ ಗೊತ್ತಾಗಿದೆ. ‘ಓಹ್ ಮೈ ಗಾಡ್’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಪೊಲೀಸ್ ಬಂದ ವಿಷಯ ನನಗೆ ತಿಳಿದಿರಲಿಲ್ಲ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ