ಮಡೆನೂರು ಮನು ಆ ರೀತಿ ಮಾತಾಡಿದ್ದರೆ ಖಂಡಿತಾ ತಪ್ಪು: ವಿನೋದ್ ಪ್ರಭಾಕರ್

Updated on: Jun 15, 2025 | 9:13 AM

ನಟ ಮಡೆನೂರು ಮನು ಅವರು ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗಿದ್ದಾರೆ. ಕನ್ನಡ ಚಿತ್ರರಂಗ ಖ್ಯಾತ ಹೀರೋಗಳ ಬಗ್ಗೆ ಮನು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಒಂದು ಆಡಿಯೋ ವೈರಲ್ ಆಗಿದೆ. ಆ ಕುರಿತು ‘ಮಾದೇವ’ ಸಿನಿಮಾದ ನಟ ವಿನೋದ್ ಪ್ರಭಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗಿರುವ ನಟ ಮಡೆನೂರು ಮನು (Madenur Manu) ಅವರು ಕನ್ನಡ ಚಿತ್ರರಂಗದ ಹಿರಿಯ ನಟರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಆ ಕುರಿತು ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಇನ್ನೂ ಅದನ್ನು ಕೇಳಿಸಿಕೊಂಡಿಲ್ಲ. ಬೇರೆಯವರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಒಂದು ವೇಳೆ ಅವರೇ ಆ ರೀತಿ ಮಾತನಾಡಿದ್ದು ಹೌದಾದರೆ ಅದು ಖಂಡಿತಾ ತಪ್ಪು. ಎಲ್ಲ ಹಿರಿಯರಿಗೆ ನಾವು ಗೌರವ ಕೊಡಬೇಕು. ಯಾಕೆಂದರೆ, ಅವರೇ ಚಿತ್ರರಂಗ ಕಟ್ಟಿದ್ದು’ ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ. ‘ಮಾದೇವ’ ಸಿನಿಮಾ (Maadeva Movie) ಬಿಡುಗಡೆ ಆಗಿದ್ದು, ಹಾಸನಕ್ಕೆ ಅವರು ಭೇಟಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.