Video: ಬಸ್​ನಲ್ಲಿ ಕಂಡಕ್ಟರ್ ಮೊಬೈಲ್​​ನ್ನೇ ಕದ್ದ ಚಾಲಾಕಿ ಕಳ್ಳ

Updated on: Jun 10, 2025 | 11:53 AM

ಪ್ರತಿದಿನ ಹಲವಾರು ಕಳ್ಳತನ ಮತ್ತು ದರೋಡೆ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಹೆಚ್ಚಿನವರು ಮೊಬೈಲ್, ಆಭರಣಗಳು, ಪರ್ಸ್​ಗಳನ್ನು ಕಳೆದುಕೊಳ್ಳುತ್ತಾರೆ. ಚಾಲಾಕಿ ಕಳ್ಳನೊಬ್ಬ ಚಲಿಸುತ್ತಿರುವ ಬಸ್ ಒಳಗೆ ಬಸ್ ಕಂಡಕ್ಟರ್ ಮೊಬೈಲ್​​ನ್ನೇ ಕದ್ದಿರುವ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಎಕ್ಸ್​ನಲ್ಲಿ ಹಂಚಿಕೊಳ್ಳಲಾಗಿದೆ.ವೀಡಿಯೊದಲ್ಲಿ, ಬಸ್ ಕಂಡಕ್ಟರ್ ಪ್ರಯಾಣಿಕರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು ಮತ್ತು ಒಬ್ಬ ವ್ಯಕ್ತಿ ಕಂಡಕ್ಟರ್ ಹಿಂದೆ ನಿಂತಿದ್ದಾನೆ.

ನವದೆಹಲಿ, ಜೂನ್ 10: ಪ್ರತಿದಿನ ಹಲವಾರು ಕಳ್ಳತನ ಮತ್ತು ದರೋಡೆ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಹೆಚ್ಚಿನವರು ಮೊಬೈಲ್, ಆಭರಣಗಳು, ಪರ್ಸ್​ಗಳನ್ನು ಕಳೆದುಕೊಳ್ಳುತ್ತಾರೆ. ಚಾಲಾಕಿ ಕಳ್ಳನೊಬ್ಬ ಚಲಿಸುತ್ತಿರುವ ಬಸ್ ಒಳಗೆ ಬಸ್ ಕಂಡಕ್ಟರ್ ಮೊಬೈಲ್​​ನ್ನೇ ಕದ್ದಿರುವ ವಿಡಿಯೋ ವೈರಲ್ ಆಗಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಎಕ್ಸ್​ನಲ್ಲಿ ಹಂಚಿಕೊಳ್ಳಲಾಗಿದೆ.ವೀಡಿಯೊದಲ್ಲಿ, ಬಸ್ ಕಂಡಕ್ಟರ್ ಪ್ರಯಾಣಿಕರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು ಮತ್ತು ಒಬ್ಬ ವ್ಯಕ್ತಿ ಕಂಡಕ್ಟರ್ ಹಿಂದೆ ನಿಂತಿದ್ದಾನೆ.ಬಸ್ ನಿಲ್ಲಿಸಿ ಬಾಗಿಲು ತೆರೆದಾಗ ಕಳ್ಳ ಮುಂದೆ ಬಾಗಿ ಕಂಡಕ್ಟರ್ ಮೊಬೈಲ್ ಕದ್ದು ಪರಾರಿಯಾಗಿದ್ದಾರೆ.ಆದರೂ ಕಂಡಕ್ಟರ್ ಗಮನಕ್ಕೆ ಅದು ಬಂದಿರಲಿಲ್ಲ. ನಂತರ ಓರ್ವ ಮಹಿಳೆ, ಓರ್ವ ಪುರುಷ ಬಸ್ ಹತ್ತುವುದನ್ನು ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More