AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್; ವಿಡಿಯೋ ನೋಡಿ

IPL 2026: ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್; ವಿಡಿಯೋ ನೋಡಿ

ಪೃಥ್ವಿಶಂಕರ
|

Updated on: Apr 25, 2026 | 4:15 PM

Share

IPL 2026: ಐಪಿಎಲ್ 2026ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಈ ಆವೃತ್ತಿಯ ಐದನೇ ಗೆಲುವು ದಾಖಲಿಸಿತು. ವಿರಾಟ್ ಕೊಹ್ಲಿ 81 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಜೊತೆಗೆ ಆರ್‌ಸಿಬಿ ಪ್ರಾಯೋಜಕರಿಂದ ಸ್ಮಾರ್ಟ್ ಟಿವಿ ಮತ್ತು ಸ್ಮಾರ್ಟ್‌ಫೋನ್ ಬಹುಮಾನವಾಗಿ ಪಡೆದರು. ಈ ಗೆಲುವಿನೊಂದಿಗೆ ಕೊಹ್ಲಿ ತಾತ್ಕಾಲಿಕವಾಗಿ ಆರೆಂಜ್ ಕ್ಯಾಪ್ ಧರಿಸಿದ್ದಾರೆ.

ಐಪಿಎಲ್ 2026 ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಈ ಆವೃತ್ತಿಯ ಐದನೇ ಗೆಲುವು ದಾಖಲಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 81 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಹೀಗಾಗಿ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಇದರ ಜೊತೆಗೆ ಅವರಿಗೆ ವಿಶೇಷ ಬಹುಮಾನ ನೀಡಲಾಗಿದೆ.

ವಾಸ್ತವವಾಗಿ ಪಂದ್ಯ ಶ್ರೇಷ್ಠ ವಿರಾಟ್ ಕೊಹ್ಲಿಗೆ ಆರ್‌ಸಿಬಿ ಡ್ರೆಸ್ಸಿಂಗ್ ಕೋಣೆಯಲ್ಲಿ ಸ್ಮಾರ್ಟ್ ಟಿವಿ ಮತ್ತು ಸ್ಮಾರ್ಟ್‌ಫೋನ್ ಸೇರಿದಂತೆ ಪ್ರತ್ಯೇಕ ಪ್ರಶಸ್ತಿಗಳನ್ನು ನೀಡಲಾಯಿತು. ಈ ಪ್ರಶಸ್ತಿಗಳನ್ನು ಆರ್‌ಸಿಬಿ ಪ್ರಾಯೋಜಕರು ಪ್ರದಾನ ಮಾಡಿದ್ದು, ಇದರಲ್ಲಿ ಸುಮಾರು 40,000 ರೂ. ಬೆಲೆಯ 43 ಇಂಚಿನ LED ಸ್ಮಾರ್ಟ್ ಟಿವಿ. ಹಾಗೂ 45,000 ರೂ ಮೌಲ್ಯದ ಸ್ಮಾರ್ಟ್‌ಫೋನ್ ಕೊಹ್ಲಿಗೆ ಬಹುಮಾನವಾಗಿ ಸಿಕ್ಕಿತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಆಡಿದ ಕೊನೆಯ ಲೀಗ್ ಪಂದ್ಯ ಇದಾಗಿದ್ದರಿಂದ ಕೊಹ್ಲಿಯ ಇನ್ನಿಂಗ್ಸ್ ವಿಶೇಷವಾಗಿತ್ತು. ಈ ಅರ್ಧಶತಕದೊಂದಿಗೆ, ಕೊಹ್ಲಿ 328 ರನ್‌ಗಳೊಂದಿಗೆ ಐಪಿಎಲ್ 2026 ರಲ್ಲಿ ತಾತ್ಕಾಲಿಕವಾಗಿ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

Follow Us