‘ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸಿಗುತ್ತಿದೆ ದೊಡ್ಡ ಅಧಿಕಾರಿಗಳ ಬೆಂಬಲ’
ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಿದ ಬಳಿಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಕೂಡ ವಿಷ್ಣುವರ್ಧನ್ ಫ್ಯಾನ್ಸ್ ಪ್ರತಿಭಟನೆ ಮಾಡಿದ್ದರು. ಬಳಿಕ ಅವರಿಗೆ ಹಲವರ ಬೆಂಬಲ ಸಿಕ್ಕಿದೆಯಂತೆ.
ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ ಸಮಾಧಿ (Vishnuvardhan Samadhi) ನೆಲಸಮ ಮಾಡಿದ ಬಳಿಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಕೂಡ ವಿಷ್ಣುವರ್ಧನ್ ಫ್ಯಾನ್ಸ್ ಪ್ರತಿಭಟನೆ ಮಾಡಿದ್ದರು. ಬಳಿಕ ತಮಗೆ ಹಲವರ ಬೆಂಬಲ ಸಿಕ್ಕಿದೆ ಎಂದ ಫ್ಯಾನ್ಸ್ (Vishnuvardhan Fans) ಹೇಳಿದ್ದಾರೆ. ‘ಇಡೀ ಕರ್ನಾಟಕದಲ್ಲಿ ವಿಷ್ಣು ಅಭಿಮಾನಿಗಳು ಇದ್ದಾರೆ. ಹೆಸರು ಹೇಳದೆಯೇ ಅನೇಕ ಐಎಎಸ್, ಕೆಎಎಸ್, ಪೊಲೀಸ್ ಅಧಿಕಾರಿಗಳು ನಮಗೆ ಕರೆ ಮಾಡಿ ಬೆಂಬಲ ನೀಡಿದ್ದಾರೆ’ ಎಂದು ವಿಷ್ಣುವರ್ಧನ್ ಅಭಿಮಾನಿ ಕ್ರಾಂತಿ ರಾಜು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
