ಮಠದ ಅಂಗಳ ತಲುಪಿದ ಹೆಚ್ಡಿಕೆ-ಡಿಕೆಶಿ ಜಟಾಪಟಿ: ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡುವಿನ ಜಟಾಪಟಿ ಮಠದ ಅಂಗಳ ತಲುಪಿದೆ. ಹೌದು...ಒಕ್ಕಲಿಗ ಪ್ರಭಾವಿ ನಾಯಕರ ನಡುವಿನ ಆರೋಪ ಪ್ರತ್ಯಾರೋಪ ಬಗ್ಗೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಮಠದ ನಿಶ್ಚಲಾನಂದ ಸ್ವಾಮೀಜಿ ಪ್ರಸ್ತಾಪಿಸಿದ್ದು, ಡಿಕೆ ಶಿವಕುಮಾರ್ ಸಿಎಂ ಆಗಿ ಕೆಲಸ ಮಾಡುತ್ತಿರುವಾಗ ತೊಂದರೆ ಕೊಡುತ್ತಿದ್ದಾರೆ. ಪರೋಕ್ಷವಾಗಿ ಕುಮಾರಸ್ವಾಮಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ನವೆಂಬರ್ 20): ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡುವಿನ ಜಟಾಪಟಿ ಮಠದ ಅಂಗಳ ತಲುಪಿದೆ. ಹೌದು…ಒಕ್ಕಲಿಗ ಪ್ರಭಾವಿ ನಾಯಕರ ನಡುವಿನ ಆರೋಪ ಪ್ರತ್ಯಾರೋಪ ಬಗ್ಗೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಮಠದ ನಿಶ್ಚಲಾನಂದ ಸ್ವಾಮೀಜಿ ಪ್ರಸ್ತಾಪಿಸಿದ್ದು, ಡಿಕೆ ಶಿವಕುಮಾರ್ ಸಿಎಂ ಆಗಿ ಕೆಲಸ ಮಾಡುತ್ತಿರುವಾಗ ತೊಂದರೆ ಕೊಡುತ್ತಿದ್ದಾರೆ. ಪರೋಕ್ಷವಾಗಿ ಕುಮಾರಸ್ವಾಮಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಸುಮ್ಮನೆ ಬಿಡುತ್ತಿಲ್ಲ ಆಡಳಿತ ಮಾಡಲಿಕ್ಕೆ. ಅವರ ಮನಸ್ಸು ನೋಯಿಸುವಂತ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಮುದಾಯದ ಜನಾಂಗ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಬೆಂಗಳೂರಿನ ಲಗ್ಗೆರೆಯಲ್ಲಿ ಕೆಂಪೇಗೌಡರ ಕಂಚಿನ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿಶ್ಚಲಾನಂದ ಸ್ವಾಮೀಜಿ , ಡಿಕೆ ಶಿವಕುಮಾರ್ ಸಿಎಂ ಆಗಿ ಕೆಲಸ ಮಾಡುತ್ತಿರುವಾಗ ತೊಂದರೆ ಕೊಡುತ್ತಿದ್ದಾರೆ. ಅವರನ್ನು ಸುಮ್ಮನೆ ಬಿಡುತ್ತಿಲ್ಲ. ಸಿಎಂ ಕೆಲಸ ಮಾಡಲು ಈ ಸಮುದಾಯವರು ಫ್ರೀ ಆಗಿ ಬಿಟ್ಟುಬಿಡಿ. ತಪ್ಪು ಮಾಡಿದರೆ ಟೀಕೆ ಮಾಡಿ, ಶಾಸಕಾಂಗ ಇದೆ, ಅಲ್ಲಿ ಟೀಕೆ ಮಾಡಿ. ದೂರದೃಷ್ಟಿ ಇಟ್ಟುಕೊಂಡು ಒಂದಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಒಂದು ಅಪರೂಪದಲ್ಲಿ ಅಧಿಕಾರ ಪಡೆದುಕೊಂಡಾಗ ಸಲಹೆ ಕೊಡಬೇಕು. ಸಿಎಂ ಡಿಕೆಶಿ ಕೆಲಸ ಮಾಡುವುದಕ್ಕೆ ಸುಗಮದ ದಾರಿಯನ್ನು ಬಿಡಬೇಕು.ಕೆಂಪೇಗೌಡರ ಜನ್ಮದಿನೋತ್ಸವ ದಿನ 15 ಲಕ್ಷ ಸಸಿಗಳನ್ನು ಹಾಕಿಸಿದ್ದಾರೆ. ಹೊಸ ಹೊಸ ಯೋಜನೆಗಳಿಗೆ ನಾವು ಸೂಕ್ತ ಸಲಹೆಗಳನ್ನು ಕೊಡಬೇಕು. ಆಗ ಬೆಂಗಳೂರು ಬೆಳೆಸಲು ಈ ಸಿಎಂ ಕೈಯಲ್ಲಿ ಕೂಡ ಸಾಧ್ಯ ಆಗುತ್ತೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
