Karnataka Budget Session: ವಿಶ್ವನಾಥ್ ಮತ್ತು ಬೈರತಿ ಸುರೇಶ್ ಬೀಗರಾದರೇನು, ರಾಜಕಾರಣ ಮತ್ತು ಸದನದಲ್ಲಿ ವಿರೋಧಿಗಳು!
ವಿಶ್ವನಾಥ್ ಅವರ ಆಕ್ಷೇಪಣೆಗೆ ಪ್ರತಿಕ್ರಿಯೆ ನೀಡುವ ಸಚಿವ ಸುರೇಶ್, ಶಾಸಕರು ವಿನಾಕಾರಣ ಸರ್ಕಾರವನ್ನು ದೂರುತ್ತಿದ್ದಾರೆ, ನಗರಸಭೆ ಮತ್ತು ಪುರಸಭೆಗಳು ಖರ್ಚು ವೆಚ್ಚಗಳನ್ನು ತಾವೇ ನೋಡಿಕೊಳ್ಳಬೇಕು, ಅವುಗಳಿಗೆ ಆದಾಯದ ಮೂಲ ಇದ್ದೇ ಇರುತ್ತದೆ, ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬನೆ ಸರಿಯಲ್ಲ ಎಂದು ಹೇಳುತ್ತಾರೆ.
ಬೆಂಗಳೂರು, 14 ಮಾರ್ಚ್: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ಮತ್ತು ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಬೀಗರು ಅನ್ನೋದು ಕನ್ನಡಿಗರಿಎಗ ಗೊತ್ತು. ಆದರೆ ರಾಜಕಾರಣದಲ್ಲಿ ಅವರು ಬೇರೆ ಬೇರೆ ಪಕ್ಷಗಳ ಶಾಸಕರು. ನಗರಸಭೆಗಳಿಗೆ ಅನುದಾನ ಸಿಗದ ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ವಿಶ್ವನಾಥ್ ತಾನು ಯಲಹಂಕ ಪುರಸಭೆಯನ್ನು ಹರಸಾಹಸಪಟ್ಟು ನಗರಸಭೆಗೆ ಅಪ್ಗ್ರೇಡ್ ಮಾಡಿಸಿಕೊಂಡಿದ್ದು ವ್ಯರ್ಥ ಅನಿಸುತ್ತಿದೆ, ಕಳೆದ ಎರಡು ವರ್ಷಗಳಿಂದ ಒಂದು ರೂಪಾಯಿ ಅನುದಾನವೂ ಯಲಹಂಜ ನಗರಸಭೆಗೆ ಸಿಕ್ಕಿಲ್ಲ ಎನ್ನುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಒಳಜಗಳ: ಡಿಸಿಸಿ ಬ್ಯಾಂಕ್ ಮತ್ತು ಕೋಮುಲ್ಗೆ ಸಂಕಷ್ಟ