ಕಾಂಗ್ರೆಸ್​ಗೆ ಹೋದ ಒಕ್ಕಲಿಗ ನಾಯಕ ಬಿಎಲ್ ಶಂಕರ್ ಅನುಭವಿಸಿದ ಅಧಿಕಾರ ಯಾವುದು? ಹೆಚ್ ಡಿ ರೇವಣ್ಣ

|

Updated on: Dec 06, 2024 | 6:55 PM

ಈಗಾಗಲೇ ವರದಿಯಾಗಿರುವಂತೆ ನಿನ್ನೆ ಹಾಸನದಲ್ಲಿ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಹೆಚ್ ಡಿ ದೇವೇಗೌಡ, ಅವರ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಟಾರ್ಗೆಟ್ ಮಾಡಿದರು. ಭಾಷಣ ಮಾಡಿದವರೆಲ್ಲ ದೇವೇಗೌಡ ಕುಟುಂಬದ ಹೆಸರನ್ನು ಉಲ್ಲೇಖಿಸಿದರು, ಅವರು ಮಾಡಿದ ಕಾಮೆಂಟ್ ಗಳಿಗೆ ಜೆಡಿಎಸ್ ನಾಯಕರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಹಾಸನ: ನಿನ್ನೆ ಜನಕಲ್ಯಾಣ ಸಮಾವೇಶದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಪ್ರತಿ ಅಂಶಕ್ಕೆ ಜೆಡಿಎಸ್ ನಾಯಕರು ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹೆಚ್ ಡಿ ರೇವಣ್ಣ ಒಕ್ಕಲಿಗರ ನಾಯಕರನ್ನು ದೇವೇಗೌಡರು ಬೆಳೆಸಲಿಲ್ಲ ಎಂದು ಸಿಎಂ ಹೇಳುತ್ತಾರೆ, ಬಿಎಲ್ ಶಂಕರ್ ಜೆಡಿಎಸ್ ನಲ್ಲಿದ್ದವರು ಕಾಂಗ್ರೆಸ್​ಗೆ ಹೋದರು, ಅಲ್ಲಿಗೆ ಹೋದ ಮೇಲೆ ಯಾವ ಅಧಿಕಾರ ಅನುಭವಿಸಿದರು? ಈಗಲಾದರೂ ಕಾಲ ಮಿಂಚಿಲ್ಲ, ಅವರನ್ನು ಎಂಎಲ್​ಸಿ ಮಾಡಿ ಯಾವುದಾರೂ ಖಾತೆಯ ಮಂತ್ರಿಗಿರಿ ನೀಡಿ ಒಕ್ಕಲಿಗ ಸಮುದಾಯವನ್ನು ತೃಪ್ತಿಪಡಿಸಲಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜೆಡಿಎಸ್ ಪಕ್ಷವನ್ನೂ ಯಾರೇನೂ ಮಾಡಕ್ಕಾಗಲ್ಲ, ಜನಕಲ್ಯಾಣದಂಥ ಹಲವಾರು ಸಮಾವೇಶಗಳನ್ನು ನೋಡಿದ್ದೇನೆ: ಹೆಚ್ ಡಿ ರೇವಣ್ಣ