ಜೆಡಿಎಸ್ ಪಕ್ಷವನ್ನೂ ಯಾರೇನೂ ಮಾಡಕ್ಕಾಗಲ್ಲ, ಜನಕಲ್ಯಾಣದಂಥ ಹಲವಾರು ಸಮಾವೇಶಗಳನ್ನು ನೋಡಿದ್ದೇನೆ: ಹೆಚ್ ಡಿ ರೇವಣ್ಣ
ದೆಹಲಿಗೆ ಬಂದಿರುವ ವಿಷಯವನ್ನು ಹೇಳಿದ ರೇವಣ್ಣ, ಹಾಸನ ರಿಂಗ್ ರೋಡ್ ಯೋಜನೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿತ್ತು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೇವೇಗೌಡ ಮತ್ತು ಕುಮಾರಸ್ವಾಮಿಯರೊಂದಿಗೆ ಭೇಟಿಯಾಗಿ ಹಣ ಮಂಜೂರು ಮಾಡಿಸಿಕೊಂಡಿದ್ದೇವೆ, ಜಿಲ್ಲೆಯಲ್ಲಿ 5 ರೇಲ್ವೇ ಯೋಜನೆಗಳ ಸಲುವಾಗಿ ರೇಲ್ವೇ ಸಚಿವರನ್ನು ಭೇಟಿಯಾಗಿದ್ದೇವೆ ಎಂದು ಹೇಳಿದರು.
ದೆಹಲಿ: ನಾಳೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷದ ಅದ್ದೂರಿ ಜನಕಲ್ಯಾಣ ಸಮಾವೇಶ ನಡೆಯಲಿದೆ. ದೆಹಲಿ ಪ್ರವಾಸದಲ್ಲಿರುವ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರನ್ನು ಈ ಬಗ್ಗೆ ಕೇಳಿದಾಗ; ಮಾಡಿಕೊಳ್ಳಲಿ, ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ ಹಾಸನ ಜಿಲ್ಲೆಯನ್ನಂತೂ ಉದ್ಧಾರ ಮಾಡಲಿಲ್ಲ, ಇನ್ನಾದರೂ ಮಾಡಲಿ, ಹೆಚ್ ಡಿ ದೇವೇಗೌಡರ ಕುಟುಂಬವನ್ನು ಮುಗಿಸುವುದು ಸಾಧ್ಯವಿಲ್ಲ, ಲೋಕಸಭಾ ಚುನಾವಣೆಯಲ್ಲಿ ಏನು ನಡೆಯಿತು ಅಂತ ಎಲ್ಲರಿಗೂ ಗೊತ್ತಿದೆ, 6 ಬಾರಿ ಶಾಸಕನಾಗಿ ಅಯ್ಕೆಯಾಗಿರುವ ತಾನು ಇಂಥ ಹಲವಾರು ಸಮಾವೇಶಗಳನ್ನು ನೋಡಿದ್ದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೆಚ್ ಡಿ ರೇವಣ್ಣ ಹೇಳಿದ್ದನ್ನು ತಿಳಿಸಿದಾಗ ನಿಖಿಲ್ ದೊಡ್ಡಪ್ಪನ ಹೆಸರು ಹೇಳದೆ ಪ್ರತಿಕ್ರಿಯೆ ನೀಡಿದರು!
Latest Videos