ಸರ್ಕಾರೀ ಶಾಲೆ ಅವರಣದಲ್ಲಿ ಮಸೀದಿ ಕಟ್ಟಿರುವುದು ವಕ್ಫ್ ಬೋರ್ಡ್ ದುರಹಂಕಾರವಲ್ಲದೆ ಮತ್ತೇನು? ಅಶೋಕ

|

Updated on: Nov 19, 2024 | 2:48 PM

ಬಿಜೆಪಿ ಎಲ್ಲೆಲ್ಲಿ ಹೋರಾಟ ನಡೆಸುತ್ತಿದೆಯೋ ಅಂಥ ಸ್ಥಳಗಳಲ್ಲಿ ವಕ್ಫ್ ಬೋರ್ಡ್ ನೀಡಿದ ನೋಟೀಸ್​ಗಳನ್ನು ವಾಪಸ್ಸು ಪಡೆಯಲಾಗುತ್ತಿದೆ, ವಿರೋಧ ಪಕ್ಷದ ತಾಕತ್ತು ಏನು ಅನ್ನೋದನ್ನು ತೋರಿಸಿದ್ದೇವೆ, ಸ್ಮಶಾನದಲ್ಲಿ ಇರಬೇಕಾದ ಪಿಶಾಚಿಗಳು ಊರೊಳಗೆ ಬಂದಿವೆ, ಅವುಗಳನ್ನೆಲ್ಲ ವಾಪಸ್ಸು ಸ್ಮಶಾನಕ್ಕೆ ಓಡಿಸಬೇಕಾಗಿದೆ ಎಂದು ಅಶೋಕ ಹೇಳಿದರು.

ಚಿಕ್ಕಬಳ್ಳಾಪುರ: ಜಿಲ್ಲೆಯ ಕಂದವಾರದಲ್ಲಿ ವಕ್ಫ್ ಬೋರ್ಡ್ ತನ್ನ ಆಸ್ತಿಯೆಂದು ಸಾಧಿಸುತ್ತಾ ಮಸೀದಿ ಮತ್ತು ದರ್ಗಾ ಕಟ್ಟಿಸಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ವಕ್ಫ್ ಬೋರ್ಡ್ ದುರಹಂಕಾರ ಇಲ್ಲಿ ನಿಚ್ಚಳವಾಗಿ ಕಾಣುತ್ತಿದೆ, ಸರಕಾರೀ ಶಾಲೆಯ ಅವರಣದಲ್ಲಿ ಅವರು ಮಸೀದಿ ಕಟ್ಟುತ್ತಾರೆ ಮತ್ತು ಸರ್ಕಾರ ಮೌನವಾಗಿರುತ್ತದೆ ಅಂದರೆ ಸಿದ್ದರಾಮಯ್ಯ ಸರ್ಕಾರದ ಪಾಪದ ಕೊಡ ತುಂಬಿದೆ, ರೈತರ ಪಹಣಿಗಳಲ್ಲಿ ವಕ್ಫ್ ಅಂತ ನಮೂದಾಗಿರುವುದನ್ನು ಅಳಿಸುವವರೆಗೆ ಮತ್ತು 1994ರ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡದ ಹೊರತು ಬಿಜೆಪಿ ವಿಶ್ರಮಿಸುವುದಿಲ್ಲ, ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮುಟ್ಟಿದರೆ ಜನ ದಂಗೆಯೇಳುತ್ತಾರೆ ಅನ್ನಲು ಸಿದ್ದರಾಮಯ್ಯರೇನು ಪರಮಾತ್ಮನ ಅಪರಾವತಾರವೇ? ಆರ್ ಅಶೋಕ

Published on: Nov 19, 2024 02:47 PM