ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?

|

Updated on: Dec 03, 2024 | 9:13 PM

ಬಸನಗೌಡ ಪಾಟೀಲ್​ ಯತ್ನಾಳ್ ಮತ್ತು ಅವರ ತಂಡ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರನ್ನು ಭೇಟಿ ಮಾಡಿದೆ.

ನವದೆಹಲಿ, (ಡಿಸೆಂಬರ್ 03): ಬಸನಗೌಡ ಪಾಟೀಲ್​ ಯತ್ನಾಳ್ ಮತ್ತು ಅವರ ತಂಡ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರನ್ನು ಭೇಟಿ ಮಾಡಿದೆ. ನವದೆಹಲಿಯಲ್ಲಿಂದು ಯತ್ನಾಳ್ ತಂಡ ದಾಂಬಿಕಾ ಪಾಲ್ ಅವರನ್ನು ಭೇಟಿಯಾಗಿ ವಕ್ಫ್​ ವಿವಾದದ ವರದಿಯನ್ನು ಸಲಿಸಿತು.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅರವಿಂದ್​ ಲಿಂಬಾವಳಿ, ವಕ್ಫ್ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್​​ ಭೇಟಿಯಾಗಿದ್ದು, ಸುಮಾರು ಹೊತ್ತು ನಮ್ಮ ತಂಡದ ಜೊತೆ ಚರ್ಚೆ ಮಾಡಿದ್ದಾರೆ. ವಿಜಯಪುರದಲ್ಲಿ ಯತ್ನಾಳ್ ಹೋರಾಟ ಸ್ಥಳಕ್ಕೆ ಪಾಲ್ ಬಂದಿದ್ರು. ಪಾಲ್ ಕೊಟ್ಟಂತಹ ಸಲಹೆ ಮೇರೆಗೆ ಪ್ರವಾಸ ಮಾಡಿದ್ದೆವು. ರಾಜ್ಯದ 7 ಜಿಲ್ಲೆಗಳಲ್ಲಿ ನಮ್ಮ ತಂಡ ಪ್ರವಾಸ ಮಾಡಿದೆ. ಪ್ರವಾಸದ ವರದಿಯನ್ನ ಈಗ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಕೇಸ್‌ ಟು ಕೇಸ್ ವರದಿ ಸಿದ್ಧಪಡಿಸಿ ಎಂದು ಸಲಹೆ ನೀಡಿದ್ದಾರೆ. ನಾವು ಅಧಿಕಾರಿಗಳಿಗೆ ನಾಳೆ ಸಂಪೂರ್ಣ ವರದಿ ಸಲ್ಲಿಸುತ್ತೇವೆ. ರೈತರು, ಮಠಾಧೀಶರಿಗೆ ಮಾತುಕೊಟ್ಟಂತೆ ವರದಿ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.