ಕಸದ ತೊಟ್ಟಿ ಸೇರಿದ್ದ ಡೈಮಂಡ್ ನೆಕ್ಲೆಸ್ ಹುಡುಕಿಕೊಟ್ಟ ಪೌರಕಾರ್ಮಿಕ, ಸಿಕ್ಕಿದ್ದೇ ರೋಚಕ

|

Updated on: Jul 22, 2024 | 5:06 PM

ವ್ಯಕ್ತಿಯೊಬ್ಬರು ಮಿಸ್​ ಆಗಿ ಡಸ್ಟ್​ ಬಿನ್​ಗೆ ಹಾಕಿದ್ದ ಬರೋಬ್ಬರಿ ಐದು ಲಕ್ಷ ರೂಪಾಯಿ ಮೌಲ್ಯದ ಡೈಮಂಡ್​ ನೆಕ್ಲೆಸ್​ ಸಿಕ್ಕಿದೆ. ಡಸ್ಟ್​ ಬಿನ್​ ಮೂಲಕ ಕಸದ ತೊಟ್ಟಿಗೆ ಹೋಗಿದ್ದ ಡೈಮೆಂಡ್ ನೆಕ್ಸೆಸ್​ ಕೊನೆಗೆ ಮಾಲೀಕನಿಗೆ ಸಿಕ್ಕಿದೆ. ಆದ್ರೆ, ಡಸ್ಟ್​ ಬಿನ್ ಸೇರಿದ್ದ ಡೈಮಂಡ್ ನೆಕ್ಲೆಸ್​ ಸಿಕ್ಕಿದ್ದೇ ರೋಚಕ..

ಚೆನೈ, (ಜುಲೈ 22): ಆಕಸ್ಮಿಕವಾಗಿ ಮನೆಯ ಡಸ್ಟ್​ ಬಿನ್​ ಮೂಲಕ ಕಸದ ತೊಟ್ಟಿ ಸೇರಿದ್ದ ಬರೋಬ್ಬರಿ ಐದು ಲಕ್ಷ ರೂಪಾಯಿ ಮೌಲ್ಯದ ಡೈಮಂಡ್ ನೆಕ್ಲೆಸ್​ ಮರಳಿ ಸಿಕ್ಕಿದೆ. ಪೌರ ಕಾರ್ಮಿಕರು ಹುಡುಕಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಜ್ರದ ಹಾರವನ್ನು ವಾರಸುದಾರರಿಗೆ ವಾಪಸ್‌ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಸ್ವಚ್ಛತಾ ಸಿಬ್ಬಂದಿ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಚೆನ್ನೈನ ವಿರುಗಂಪಕ್ಕಂ ನಿವಾಸಿ ದೇವರಾಜ್‌ ಎನ್ನುವವರು ತಮ್ಮ ಸಂಬಂಧಿಯೊಬ್ಬರಿಗೆ ಗಿಫ್ಟ್‌ ನೀಡಲು ಲಕ್ಷ ಮೌಲ್ಯದ ವಜ್ರದ ನೆಕ್ಲೇಸ್‌ಅನ್ನು ಖರೀದಿಸಿದ್ದರು. ಆದರೆ ಮನೆಯಲ್ಲಿ ಆಕಸ್ಮಿಕವಾಗಿ ಕಸದೊಂದಿಗೆ ವಜ್ರದ ನೆಕ್ಲೇಸ್‌ ಅನ್ನು ಕೂಡಾ ತೊಟ್ಟಿಗೆ ಎಸೆದಿದ್ದಾರೆ. ಮೊದಲು ಈ ವಿಚಾರ ತಿಳಿದಿರಲಿಲ್ಲ. ಬಳಿಕ ದೇವರಾಜ್‌ಗೆ ಕಸದೊಂದಿಗೆ ನೆಕ್ಲೇಸ್‌ ಕೂಡಾ ಹೋಗಿದೆ ಎಂದು ತಿಳಿದು ಬಂದಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಆಭರಣವನ್ನು ಕಳೆದುಕೊಂಡ ಅವರು, ಕೂಡಲೇ ಕೂಡಲೇ ಗ್ರೇಟರ್‌ ಚೆನ್ನೈ ಕಾರ್ಪೋರೇಷನ್‌ (ಜಿಸಿಸಿ) ಅಧಿಕಾರಿಗಳನ್ನು ಸಂಪರ್ಕಿಸಿ ಡೈಮಂಡ್‌ ನೆಕ್ಲೇಸ್‌ ಕಳೆದುಕೊಂಡ ವಿಚಾರವನ್ನು ವಿವರಿಸಿದ್ದಾರೆ. ದೇವರಾಜ್‌ ಅವರ ಮನವಿಗೆ ಸ್ಪಂದಿಸಿದ ಗ್ರೇಟರ್‌ ಚೆನ್ನೈ ಕಾರ್ಪೋರೇಷನ್‌ (ಜಿಸಿಸಿ) ಜಿಸಿಸಿ ಗುತ್ತಿಗೆದಾರರ ಚಾಲಕ ಜೆ. ಆಂಥೋನಿಸಾಮಿ ಸ್ವಚ್ಛತಾ ಸಿಬ್ಬಂದಿಗಳ ಗಮನಕ್ಕೆ ತಂದಿದ್ದು, ಹುಡುಕುವಂತೆ ಸೂಚಿಸಿದ್ದಾರೆ. ಗ್ರೇಟರ್‌ ಚೆನ್ನೈ ಕಾರ್ಪೋರೇಷನ್‌ ಸ್ವಚ್ಛತಾ ಸಿಬ್ಬಂದಿ ಸತತ ಹುಡುಕಾಟದ ಬಳಿಕ ಅಂತಿಮವಾಗಿ ಪೌರಕಾರ್ಮಿಕರೊಬ್ಬರಿಗೆ ನೆಕ್ಸೇಸ್ ಸಿಕ್ಕಿದೆ. ಕೂಡಲೇ ಅವರು ಅದನ್ನು ಸ್ವಚ್ಛಗೊಳಿಸಿ ದೇವರಾಜ್‌ ಅವರಿಗೆ ಹಿಂದಿರುಗಿಸಿದ್ದಾರೆ. 5 ಲಕ್ಷ ಮೌಲ್ಯದ ವಜ್ರದ ನೆಕ್ಲೇಸ್ ಮತ್ತೆ ಸಿಗಲು ಸಹಾಯ ಮಾಡಿದ ಆಂಥೋನಿಸಾಮಿ ಮತ್ತು ಸ್ವಚ್ಛತಾ ಸಿಬ್ಬಂದಿಗೆ ದೇವರಾಜ್‌ ಹಾಗೂ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.