ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಕತ್ತಿಗೆ ಜಾರಕಿಹೊಳಿ ಟಾಂಗ್
ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಬೆಳಗಾವಿಯಲ್ಲಿ ಜೋರಾಯ್ತು ಕತ್ತಿ ಮತ್ತು ಜಾರಕಿಹೊಳಿ ಕುಟುಂಬದ ನಡುವಿನ ಫೈಟ್ ಜೋರಾಗಿದೆ. ಇದರ ಬೆನ್ನಲ್ಲೇ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದು, ನಿಡಸೋಶಿ ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಯ ಬಂದಾಗ ನಾವು ಕುಸ್ತಿ ಆಡುತ್ತೇವೆ. ಕುಸ್ತಿ ಅಖಾಡ ಇನ್ನೂ ದೂರವಿದೆ ಎಂದರು.
ಬೆಳಗಾವಿ, ಜುಲೈ 20): ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಬೆಳಗಾವಿಯಲ್ಲಿ ಜೋರಾಯ್ತು ಕತ್ತಿ ಮತ್ತು ಜಾರಕಿಹೊಳಿ ಕುಟುಂಬದ ನಡುವಿನ ಫೈಟ್ ಜೋರಾಗಿದೆ. ಇದರ ಬೆನ್ನಲ್ಲೇ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದು, ನಿಡಸೋಶಿ ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಯ ಬಂದಾಗ ನಾವು ಕುಸ್ತಿ ಆಡುತ್ತೇವೆ. ಕುಸ್ತಿ ಅಖಾಡ ಇನ್ನೂ ದೂರವಿದೆ. ನಮಗೆ ಅವಸರವಿಲ್ಲ. ಅವರಿಗೆ ಅರ್ಜೆಂಟ್ ಇರಬಹುದು, ನಮಗೆ ಅರ್ಜೆಂಟ್ ಇಲ್ಲ. ಕಳೆದ 20 ವರ್ಷಗಳಿಂದ ನಮ್ಮ ವಿರುದ್ಧ ಸಭೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಪ್ರಾಕ್ಟಿಕಲ್ ಬೇರೆ ಥಿಯರಿ ಬೇರೆ. ಚಿತ್ರದುರ್ಗದಲ್ಲಿ ಐದು ಲಕ್ಷ ಜನರನ್ನು ನಾವು ಸೇರಿಸಿದ್ದೇವೆ. ಇಲ್ಲಿ 2 ಸಾವಿರ ಜನರನ್ನು ಸೇರಿಸಿದ್ದರೆ ಸಾಕು. ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ ಎಂದು ಕತ್ತಿ ಕುಟುಂಬಕ್ಕೆ ಟಾಂಗ್ ಕೊಟ್ಟರು.
