Loading video

ಹರಿಯಾಣ ವಿಧಾನಸಭಾ ಚುನಾವಣೆ; ಮತದಾರನ ತೀರ್ಪಿಗೆ ತಲೆಬಾಗುತ್ತೇವೆ: ಡಿಕೆ ಶಿವಕುಮಾರ್

|

Updated on: Oct 08, 2024 | 5:04 PM

ಮುಖ್ಯಮಂತ್ರಿ ಬದಲಾವಣೆ ಇಲ್ಲ ಅನ್ನೋದನ್ನು ಪುನರುಚ್ಛರಿಸಿದ ಶಿವಕುಮಾರ್, ಎರಡೂವರೆ ವರ್ಷಗಳ ನಂತರ ಸಿಎಂ ಬದಲಾವಣೆ ವಿಚಾರ ತಮ್ಮ ಪಕ್ಷಕ್ಕೆ ಸಂಬಂಧಪಟ್ಟಿದ್ದು, ಏನೇ ನಿರ್ಧಾರವಿದ್ದರೂ ಅದು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು ಎಂದರು

ರಾಯಚೂರು: ಹರಿಯಾಣ ವಿಧಾನಸಭಾ ಚುನಾವಣೆ ಬಗ್ಗೆ ರಾಯಚೂರಿನಲ್ಲಿ ಕೊನೆಗೂ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಮತದಾರ ನೀಡಿದ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು ಎಂದರು. ಅಲ್ಲಿನ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಡಾ ಹಗರಣವನ್ನು ಪ್ರಸ್ತಾಪಿಸಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೋಲಾಯಿತು ಎಂಬ ವಾದವನ್ನು ಅಲ್ಲಗಳೆದ ಶಿವಕುಮಾರ್ ಚುನಾವಣಾ ಫಲಿತಾಂಶ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಯಾವುದೇ ಸಂಬಂಧವಿಲ್ಲ ಎಂದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಂಗಳೂರಿನ ಯಾವುದೇ ಪ್ರದೇಶದಿಂದ 699 ರೂ.ಗೆ ಏರ್​ಪೋರ್ಟ್​ಗೆ ಪ್ರಯಾಣಿಸಿ! ಇ ಟ್ಯಾಕ್ಸಿ ಸೇವೆಗೆ ಡಿಕೆ ಶಿವಕುಮಾರ್ ಚಾಲನೆ