ಬೆಂಗಳೂರಿನ ಯಾವುದೇ ಪ್ರದೇಶದಿಂದ 699 ರೂ.ಗೆ ಏರ್ಪೋರ್ಟ್ಗೆ ಪ್ರಯಾಣಿಸಿ! ಇ ಟ್ಯಾಕ್ಸಿ ಸೇವೆಗೆ ಡಿಕೆ ಶಿವಕುಮಾರ್ ಚಾಲನೆ
ಖಾಸಗಿ ಕಂಪನಿಯು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಒದಗಿಸುತ್ತಿರುವ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯ ವಿಸ್ತರಣೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಚಾಲನೆ ನೀಡಿದ್ದಾರೆ. ಕಂಪನಿಯ 170 ಇ ಟ್ಯಾಕ್ಸಿಗಳಿಗೆ ಚಾಲನೆ ನೀಡಲಾಗಿದ್ದು, ಗ್ರಾಹಕರಿಗೆ ಬೆಂಗಳೂರಿನ ಯಾವುದೇ ಪ್ರದೇಶದಿಂದ 699 ರೂ.ಗೆ ಏರ್ಪೋರ್ಟ್ಗೆ ಪ್ರಯಾಣಿಸುವ ಹೊಸ ಆಫರ್ ನೀಡಲಾಗಿದೆ. ಆ ಕುರಿತ ವಿವರ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 3: ಖಾಸಗಿ ಕಂಪನಿಯಾದ ‘ರೆಫೆಕ್ಸ್ ಇವೀಲ್ಜ್’ ನಿರ್ವಹಿಸುತ್ತಿರುವ ಹೊಸ ಎಲೆಕ್ಟ್ರಿಕ್ ಏರ್‌ಪೋರ್ಟ್ ಟ್ಯಾಕ್ಸಿ ಸೇವೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಚಾಲನೆ ನೀಡಿದರು. ಏರ್‌ಪೋರ್ಟ್ ಆಪರೇಟರ್‌ನ ಸಹಯೋಗದೊಂದಿಗೆ ‘ರೆಫೆಕ್ಸ್ ಇವೀಲ್ಜ್’ ಕಂಪನಿಯು ‘ಏರ್‌ಪೋರ್ಟ್ ಟ್ಯಾಕ್ಸಿ’ ಸೇವೆ ಒದಗಿಸುತ್ತಿದ್ದು, ಈಗಾಗಲೇ 200 ಎಲೆಕ್ಟ್ರಿಕ್ ಕಾರುಗಳು ಕಾರ್ಯಾಚರಿಸುತ್ತಿವೆ. ಇದೀಗ ಇನ್ನೂ 170 ಎಲೆಕ್ಟ್ರಿಕ್ ಕಾರುಗಳು ಸೇವೆಗೆ ಸೇರ್ಪಡೆಯಾದಂತಾಗಿದೆ.
ಇ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿರುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಸಂದೇಶ ಪ್ರಕಟಿಸಿದ್ದಾರೆ.
‘ರೆಫೆಕ್ಸ್ ಇವೀಲ್ಜ್’ ಗ್ರೂಪ್‌ನಿಂದ ನಿಯೋಜಿಸಲಾದ ಮತ್ತು ನಿರ್ವಹಿಸುವ 170 ಎಲೆಕ್ಟ್ರಿಕ್ ಕಾರುಗಳ ಸೇವೆಗೆ ಚಾಲನೆ ನೀಡಿರುವುದರಿಂದ ಸಂತೋಷವಾಗಿದೆ. ಸುಸ್ಥಿರತೆಯ ಕಡೆಗೆ ಬದ್ಧತೆಯನ್ನು ಹೆಚ್ಚಿಸುವ ಮೂಲಕ, ಈ ಎಲೆಕ್ಟ್ರಿಕ್ ಟ್ಯಾಕ್ಸಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 200 ಎಲೆಕ್ಟ್ರಿಕ್ ಕಾರುಗಳೊಂದಿಗೆ ಸೇರ್ಪಡೆಯಾಗಿವೆ. ನಮ್ಮ ಬೆಂಗಳೂರನ್ನು ಸ್ವಚ್ಛವಾಗಿ ಮತ್ತು ಹಸಿರಾಗಿಡಲು ಸಹಾಯ ಮಾಡಲಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಡಿಕೆ ಶಿವಕುಮಾರ್ ಎಕ್ಸ್ ಸಂದೇಶ
Happy to have flagged a new fleet of 170 electric cars deployed and operated by Refex eVeelz group today.
Furthering the commitment towards sustainability, these electric vehicles is great new addition to the existing 200 electric cars which are already present at the… pic.twitter.com/XVoiQnHAON
— DK Shivakumar (@DKShivakumar) October 2, 2024
699 ರೂ.ಗೆ ಏರ್ಪೋರ್ಟ್ಗೆ: ಆಫರ್
ವಿವಿಧ ಮಾದರಿಯ ಎಲೆಕ್ಟ್ರಿಕ್ ಟ್ಯಾಕ್ಸಿಯನ್ನು ಬುಕ್ ಮಾಡಿ ಪ್ರಯಾಣಿಕರು ಬೆಂಗಳೂರಿನ ಯಾವುದೇ ಪ್ರದೇಶದಿಂದ 699 ರೂ.ಗಳಿಗೆ ಏರ್ಪೋರ್ಟ್ಗೆ ಪ್ರಯಾಣಿಸುವ ಹೊಸ ಆಫರ್ ಅನ್ನೂ ಕಂಪನಿ ಘೋಷಿಸಿದೆ. ‘ರೆಫೆಕ್ಸ್ ಇವೀಲ್ಜ್’ ಕಂಪನಿಯ ಆ್ಯಪ್ನಲ್ಲಿ ಮಾತ್ರ ಈ ಸೇವೆ ದೊರೆಯಲಿದ್ದು, ಮುಂಗಡ ಕಾಯ್ದಿರಿಸುವಿಕೆಗೆ ಅನ್ವಯವಾಗಲಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ