Namma Metro: ಇಂದು ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಎರಡು ದಿನಗಳ ಕಾಲ ಗ್ರೀನ್ ಲೈನ್ ಮೆಟ್ರೋ ತಪಾಸಣೆ ನಡೆಯಲಿದೆ. ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ ಹಾಗೂ ಪೀಣ್ಯ ಇಂಡಸ್ಟ್ರಿ ನಿಲ್ದಾಣ ಸೇರಿದಂತೆ ಇಂದು ಒಟ್ಟು ನಾಲ್ಕು ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಇರಲಿದೆ. ಆದರೆ ಪೀಣ್ಯ ಇಂಡಸ್ಟ್ರಿ‌ ಟು ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋ ಸಂಚಾರ ಇರಲಿದೆ.

Namma Metro: ಇಂದು ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ನಮ್ಮ ಮೆಟ್ರೋ
Follow us
| Updated By: ಆಯೇಷಾ ಬಾನು

Updated on: Oct 03, 2024 | 10:40 AM

ಬೆಂಗಳೂರು, ಅ.03: ಇಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಕಂಡುಬರಲಿದೆ (Namma Metro). ರೈಲ್ವೆ ಸುರಕ್ಷತಾ ಆಯುಕ್ತರು ನಾಗಸಂದ್ರ-ಮಾದವಾರ ಹೊಸ ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ನಡೆಸುತ್ತಿರುವುದರಿಂದ ಇಂದು (ಅಕ್ಟೋಬರ್ 03) ಹಸಿರು ಮಾರ್ಗದಲ್ಲಿ ನಾಗಸಂದ್ರ-ಪೀಣ್ಯ ಇಂಡಸ್ಟ್ರಿ ನಿಲ್ದಾಣ ನಡುವೆ ಸಂಚಾರ ವ್ಯತ್ಯಯ ಉಂಟಾಗಲಿದೆ.

ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ ಹಾಗೂ ಪೀಣ್ಯ ಇಂಡಸ್ಟ್ರಿ ನಿಲ್ದಾಣ ಸೇರಿದಂತೆ ಇಂದು ಒಟ್ಟು ನಾಲ್ಕು ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಇರಲಿದೆ. ಎರಡು ದಿನಗಳ ಕಾಲ ಗ್ರೀನ್ ಲೈನ್ ಮೆಟ್ರೋ ತಪಾಸಣೆ ನಡೆಯಲಿದೆ. ಇಂದು ಸತತ ನಾಲ್ಕು ಗಂಟೆಗಳ ಕಾಲ ಮೆಟ್ರೋ ಪ್ರಯಾಣಿಕರಿಗೆ ಸಮಸ್ಯೆ ಆಗಲಿದೆ.

ನಾಗಸಂದ್ರ ಮತ್ತು ಮಾದವಾರ ನಿಲ್ದಾಣಗಳ ನಡುವಿನ ಹೊಸ ಮಾರ್ಗವನ್ನು ಮೆಟ್ರೋ ರೈಲ್ವೆ ಸುರಕ್ಷತ ಆಯುಕ್ತರಿಂದ ಶಾಸನಬದ್ಧ ಸುರಕ್ಷತಾ ತಪಾಸಣೆ ನಡೆಸುತ್ತಿರುವುದರಿಂದ, 3ನೇ ಅಕ್ಟೋಬರ್ 2024 ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಬದಲಾವಣೆಯಾಗಲಿದೆ.

ಹೆಚ್ಚು ಹಣ ಪೀಕುವ ಆಟೋ ಚಾಲಕರು

ಇನ್ನು ಮೆಟ್ರೋ ಸಂಚಾರವಿಲ್ಲದ ಕಾರಣ ಪ್ರಯಾಣಿಕರು ಬೇರೆ ವಿಧಿ ಇಲ್ಲದೆ ಆಟೋ ಮೊರೆ ಹೋಗಬೇಕಾಗುತ್ತೆ. ಆದರೆ ಕೆಲ ಆಟೋ ಚಾಲಕರು ಮೆಟ್ರೋ ಪ್ರಯಾಣಿಕರಿಂದ ಒನ್ ಟು ಡಬಲ್ ಹಣ ಪಡೆಯುವಂತಹ ಸಾಧ್ಯತೆ ಇದೆ. ಇಂದು ಬೆಳಿಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ನಾಲ್ಕು ಮೆಟ್ರೋ ಸ್ಟೇಷನ್ ಗಳಿಗೆ ಮೆಟ್ರೋ ಸಂಚಾರ ಇರಲ್ಲ. ಆದರೆ ಪೀಣ್ಯ ಇಂಡಸ್ಟ್ರಿ‌ ಟು ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋ ಸಂಚಾರ ಇರಲಿದೆ.

ಇದನ್ನೂ ಓದಿ: ಮೆಟ್ರೋದಲ್ಲಿ ಮಹಿಳೆಯ ಬ್ಯಾಗ್​ನಿಂದ ಹೊರಬಿದ್ದ ಏಡಿಗಳು

ಸದ್ಯದಲ್ಲೇ ನಾಗಸಂದ್ರ ಟು ಮಾದಾವರ ವರೆಗೆ ಮೆಟ್ರೋ ಸಂಚಾರ ಮಾಡಲಿದೆ. ನಾಗಸಂದ್ರ, ಮಂಜುನಾಥನಗರ, ಚಿಕ್ಕಬಿದರಕಲ್ಲು, ಹಾಗೂ ಮಾದಾವರ ನಡುವೆ ರೈಲು ಸಂಚಾರ ಮಾಡಲಿದೆ. ಈ ಮಾರ್ಗದ ಮೆಟ್ರೋ ತಪಾಸಣೆಗೆ ರೈಲ್ವೆ ಸುರಕ್ಷತಾ ಆಯುಕ್ತರು ಆಗಮಿಸಿದ್ದಾರೆ. ನಾಲ್ಕು ಮೆಟ್ರೋ ಸ್ಟೇಷನ್ ಗಳನ್ನು ಎರಡು ದಿನಗಳ ಕಾಲ ತಪಾಸಣೆ ನಡೆಸಿ ಎಲ್ಲವೂ ಸರಿಯಾಗಿದ್ದರೆ ಮಾತ್ರ ಮೆಟ್ರೋ ಓಪನ್ ಮಾಡಲು ಅನುಮತಿ ನೀಡಲಾಗುತ್ತೆ. 298 ಕೋಟಿ ವೆಚ್ಚದಲ್ಲಿ ನಾಲ್ಕು ಮೆಟ್ರೋ ಸ್ಟೇಷನ್ ಕಾಮಗಾರಿ ನಡೆದಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ರೆ, ಅಕ್ಟೋಬರ್ ಕೊನೆಯ ವಾರದಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ಮೆಟ್ರೋ ಓಪನ್ ಆಗುವ ಸಾಧ್ಯತೆ ಇದೆ. ಈ ಮೆಟ್ರೋ ಮಾರ್ಗ ಓಪನ್ ಆದರೆ ನೆಲಮಂಗಲ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲ ಆಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಹಿಷಾಸುರ ಮರ್ದಿನಿ ವಿಗ್ರಹದ ವಿಶೇಷತೆಗಳೇನು? ಇಲ್ಲಿದೆ ನೋಡಿ
ಮಹಿಷಾಸುರ ಮರ್ದಿನಿ ವಿಗ್ರಹದ ವಿಶೇಷತೆಗಳೇನು? ಇಲ್ಲಿದೆ ನೋಡಿ
‘ಬಿಗ್ ಬಾಸ್​ನ ಎಕ್ಸ್​ಪೋಸ್ ಮಾಡ್ತೀನಿ’; ಪಣ ತೊಟ್ಟ ಜಗದೀಶ್
‘ಬಿಗ್ ಬಾಸ್​ನ ಎಕ್ಸ್​ಪೋಸ್ ಮಾಡ್ತೀನಿ’; ಪಣ ತೊಟ್ಟ ಜಗದೀಶ್
Video: ಟೆಕ್ಕಿ ದಂಪತಿ ಇದ್ದ ಕಾರಿನ ಮೇಲೆ ದುಷ್ಕರ್ಮಿಗಳಿಂದ ದಾಳಿ
Video: ಟೆಕ್ಕಿ ದಂಪತಿ ಇದ್ದ ಕಾರಿನ ಮೇಲೆ ದುಷ್ಕರ್ಮಿಗಳಿಂದ ದಾಳಿ
ಮಾಂಗಲ್ಯದೊಂದಿಗೆ ಧರಿಸುವ ಕರಿಮಣಿಯ ಮಹತ್ವವೇನು? ತಿಳಿಯಿರಿ
ಮಾಂಗಲ್ಯದೊಂದಿಗೆ ಧರಿಸುವ ಕರಿಮಣಿಯ ಮಹತ್ವವೇನು? ತಿಳಿಯಿರಿ
ನವರಾತ್ರಿಯ ಮೊದಲ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ ಮೊದಲ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
Bengaluru Rains: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ; ರಸ್ತೆಗಳು ಜಲಾವೃತ
Bengaluru Rains: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ; ರಸ್ತೆಗಳು ಜಲಾವೃತ
ಥಾಣೆಯ ತಿಂಡಿ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ
ಥಾಣೆಯ ತಿಂಡಿ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ
ವರ್ತೂರು-ತನಿಷಾ ಕುಪ್ಪಂಡ ಮದುವೆ ಆಗ್ತಾರಾ? ನೇರವಾಗಿ ಉತ್ತರಿಸಿದ ಸಂತೋಷ್
ವರ್ತೂರು-ತನಿಷಾ ಕುಪ್ಪಂಡ ಮದುವೆ ಆಗ್ತಾರಾ? ನೇರವಾಗಿ ಉತ್ತರಿಸಿದ ಸಂತೋಷ್
ಮಾರ್ಟಿನ್ ಟ್ರೇಲರ್ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ಉತ್ತರ ನೀಡಿದ ಧ್ರುವ
ಮಾರ್ಟಿನ್ ಟ್ರೇಲರ್ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ಉತ್ತರ ನೀಡಿದ ಧ್ರುವ
ಧ್ವಜ ಹಿಡಿದ ಕೈಯಲ್ಲೇ ಸಿದ್ದರಾಮಯ್ಯನ ಶೂ ಬಿಚ್ಚಿದ ಕಾಂಗ್ರೆಸ್ ಕಾರ್ಯಕರ್ತ
ಧ್ವಜ ಹಿಡಿದ ಕೈಯಲ್ಲೇ ಸಿದ್ದರಾಮಯ್ಯನ ಶೂ ಬಿಚ್ಚಿದ ಕಾಂಗ್ರೆಸ್ ಕಾರ್ಯಕರ್ತ