‘ನಟ ಶಿವಣ್ಣ ನಮಗೆ ಬೆಂಬಲ ಕೊಡ್ತಾರೆ’; ಮೇಕೆದಾಟು ಪಾದಯಾತ್ರೆ ಬಗ್ಗೆ ಉಮಾಶ್ರೀ ಮಾತು
ಶಿವರಾಜ್ಕುಮಾರ್ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಈ ಕಾಲ್ನಡಿಗೆ ಪೂರ್ಣಗೊಳ್ಳುವ ಮೊದಲು ಅವರು ಇದರಲ್ಲಿ ಭಾಗವಹಿಸಲಿದ್ದಾರೆ ಎಂಬುದು ಅನೇಕರ ನಂಬಿಕೆ.
ಮೇಕೆದಾಟು ಪಾದಯಾತ್ರೆಯಲ್ಲಿ ಸ್ಯಾಂಡಲ್ವುಡ್ನ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಭಾಗಿಯಾಗಬೇಕಿತ್ತು. ಭಾನುವಾರ ಆರಂಭವಾದ ಮೇಕೆದಾಟು ಪಾದಯಾತ್ರೆಯನ್ನು ಶಿವರಾಜ್ಕುಮಾರ್ ಅವರೇ ಉದ್ಘಾಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಬೇರೆ ಕೆಲಸಗಳು ಇದ್ದ ಕಾರಣ ಅವರು ಇದರಲ್ಲಿ ಪಾಲ್ಗೊಂಡಿಲ್ಲ. ಅವರು ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಈ ಕಾಲ್ನಡಿಗೆ ಪೂರ್ಣಗೊಳ್ಳುವ ಮೊದಲು ಅವರು ಇದರಲ್ಲಿ ಭಾಗವಹಿಸಲಿದ್ದಾರೆ ಎಂಬುದು ಅನೇಕರ ನಂಬಿಕೆ. ಈ ಬಗ್ಗೆ ನಟಿ, ಕಾಂಗ್ರೆಸ್ ನಾಯಕಿ ಉಮಾಶ್ರೀ ಮಾತನಾಡಿದ್ದಾರೆ. ‘ಶಿವಣ್ಣ ನಮ್ಮ ಹೋರಾಟಕ್ಕೆ ಸಾಥ್ ನೀಡುತ್ತಾರೆ ಎನ್ನುವ ನಂಬಿಕೆ ನಮಗೆ ಇದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ನನಗೆ ಲೀಡರ್ ಪಟ್ಟ ಬೇಡ; ನಿಮ್ಮ ಜತೆ ನಾನೂ ಒಬ್ಬನಾಗಿ ಇರುತ್ತೇನೆ’: ಶಿವರಾಜ್ಕುಮಾರ್
‘ಭಜರಂಗಿ 2’ ಚಿತ್ರವನ್ನು ಪುನೀತ್ ರಾಜ್ಕುಮಾರ್ಗೆ ಅರ್ಪಿಸಿದ ಶಿವರಾಜ್ಕುಮಾರ್
Published on: Jan 11, 2022 09:35 AM