ಪಂಚಮಸಾಲಿ ಮೀಸಲಾತಿ ಜೊತೆ ಕೇಂದ್ರ ಸರ್ಕಾರ ಲಿಂಗಾಯತರನ್ನು ಒಬಿಸಿಗೆ ಸೇರಿಸುವಂತೆಯೂ ಹೋರಾಟ: ಯತ್ನಾಳ್

|

Updated on: Nov 28, 2024 | 5:49 PM

ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತ್ಯೇಕ ಹೋರಾಟ ಮಾಡಲಿರುವ ಬಗ್ಗೆ ಯತ್ನಾಳ್ ಗಮನ ಸೆಳೆದಾಗ, ಯಾರು ಬೇಡಂತಾರೆ, ತಮ್ಮೊಂದಿಗೆ ಅವರು ಮುರುಗೇಶ್ ನಿರಾಣಿ ಮತ್ತು ಹರಿಹರದ ಸ್ವಾಮಿಯನ್ನೂ ಸೇರಿಸಿಕೊಳ್ಳಲಿ ಅಂತ ಹೇಳಿ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಎಲ್ಲ ಹಗರಣಗಳನ್ನು ಪ್ರಸ್ತಾಪ ಮಾಡೋದಾಗಿ ಹೇಳಿದರು.

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ಯಾವ ಕಾರಣಕ್ಕೂ ನಿಲ್ಲೋದಿಲ್ಲ, ಡಿಸೆಂಬರ್ 10ರಂದು ಬೇರೆಯವರು ಜೊತೆಗೂಡದಿದ್ದರೂ ತಾನು ಹೋರಾಟ ಮುಂದುವರಿಸುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಪಂಚಮಸಾಲಿ ಮೀಸಲಾತಿಯಲ್ಲದೆ ಕೇಂದ್ರ ಸರ್ಕಾರವು ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸಬೇಕೆಂತಲೂ ಹೋರಾಟ ನಡೆಸಲಾಗುವುದು ಎಂದು ಯತ್ನಾಳ್ ಹೇಳಿದರು. ಬಿಜೆಪಿ ಅಧಿಕಾರಲ್ಲಿದ್ದಾಗ ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಮೌನವಾಗಿರುವುದನ್ನು ಗೇಲಿ ಮಾಡಿದ ಯತ್ನಾಳ್ ಅವರಿಗೆ ನಿಜಕ್ಕೂ ಸಮುದಾಯದ ಬಗ್ಗೆ ಕಾಳಜಿಯಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟದಲ್ಲಿ ಕೈ ಜೋಡಿಸಲಿ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಮ್ಮ ಪಕ್ಷದಲ್ಲಿ ವಂಶವಾದ, ಭ್ರಷ್ಟಾಚಾರ ನಡೆಯೋದಿಲ್ಲ, ಅಪ್ಪನ ಸ್ಥಾನಕ್ಕೆ ಮಗ ಬರುವಂತಿಲ್ಲ: ಯತ್ನಾಳ್