ಲೋಕ ಸಭಾ ಚುನಾವಣೆಗೆ ಮೊದಲು ಪಕ್ಷವನ್ನು ಸಂಘಟಿಸಿ ಪುನಶ್ಚೇತನಗೊಳಿಲಾಗುವುದು: ಜಿಟಿ ದೇವೇಗೌಡ, ಜೆಡಿಎಸ್ ಶಾಸಕ
ಜೆಡಿಎಸ್ ಪಕ್ಷ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಪ್ರಭಾವಶಾಲಿಯಾಗಿರದ ಕಾರಣ ಕೋರ್ ಕಮಿಟಿಯು ಇದೇ ತಿಂಗಳು ಕಲಬುರಗಿ, ಹೊಸಪೇಟೆ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಲ್ಲಿ ಒಂದೊಂದು ಸಭೆ ನಡೆಸಲಿದೆಯೆಂದು ಶಾಸಕ ಹೇಳಿದರು. ಹೆಚ್ ಡಿ ದೇವೇಗೌಡರು ಕಟ್ಟಿರುವ ಪ್ರಾದೇಶಿಕ ಪಕ್ಷದ ಮೇಲೆ ಜನಕ್ಕೆ ವಿಶ್ವಾಸವಿದೆ ಎಂದು ಜಿಟಿ ದೇವೇಗೌಡ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ಜೆಡಿಎಸ್ ಪಕ್ಷದ ಹಿರಿಯ ನಾಯಕ ಜಿಟಿ ದೇವೇಗೌಡ (GT Devegowda) ಲೋಕ ಸಭಾ ಚುನಾವಣೆಗೆ ಮೊದಲು ಪಕ್ಷವನ್ನು ಸಂಘಟಿಸಿ, ಪುನಶ್ಚೇತನಗೊಳಿಸುವುದರ ಜೊತೆಗೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿಯೊಂದನ್ನು (core committee) ರಚಿಸಲಾಗಿದ್ದು ಈ ಸಮಿತಿ ರಾಜ್ಯದಾದ್ಯಂತೆ ಪ್ರವಾಸ ಮಾಡಿ ಮತ್ತು ವಿಭಾಗೀಯ ಮಟ್ಟದಲ್ಲಿ, ಜಿಲ್ಲಾಮಟ್ಟದದಲ್ಲಿ ನೂತನ ಪದಾಧಿಕಾರಿಗಳನ್ನು (office bearers) ನೇಮಕ ಮಾಡಲಿದೆಯಂತೆ. ಜೆಡಿಎಸ್ ಪಕ್ಷ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಪ್ರಭಾವಶಾಲಿಯಾಗಿರದ ಕಾರಣ ಕೋರ್ ಕಮಿಟಿಯು ಇದೇ ತಿಂಗಳು ಕಲಬುರಗಿ, ಹೊಸಪೇಟೆ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಲ್ಲಿ ಒಂದೊಂದು ಸಭೆ ನಡೆಸಲಿದೆಯೆಂದು ಶಾಸಕ ಹೇಳಿದರು. ಹೆಚ್ ಡಿ ದೇವೇಗೌಡರು ಕಟ್ಟಿರುವ ಪ್ರಾದೇಶಿಕ ಪಕ್ಷದ ಮೇಲೆ ಜನಕ್ಕೆ ವಿಶ್ವಾಸವಿದೆ ಎಂದು ಜಿಟಿ ದೇವೇಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ