Assembly Session; ಅಕ್ಕಿಯ ಮಹತ್ವ ಚೆನ್ನಾಗಿ ಗೊತ್ತಿದ್ದರಿಂದಲೇ ಸಿದ್ದರಾಮಯ್ಯ 2013 ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದರು: ಜಿಟಿ ದೇವೇಗೌಡ

Assembly Session; ಅಕ್ಕಿಯ ಮಹತ್ವ ಚೆನ್ನಾಗಿ ಗೊತ್ತಿದ್ದರಿಂದಲೇ ಸಿದ್ದರಾಮಯ್ಯ 2013 ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದರು: ಜಿಟಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 12, 2023 | 2:31 PM

1966 ರಲ್ಲಿ ದೇಶದೆಲ್ಲೆಡೆ ಭೀಕರ ಬರಗಾಲ ಆವರಿಸಿದಾಗ ಮತ್ತು ತಂದೆ ಅದೇ ಸಮಯದಲ್ಲಿ ತೀರಿಕೊಂಡಾಗ ತಮ್ಮ ಕುಟುಂಬ ಅನುಭವಿಸಿದ ಕಷ್ಟವನ್ನು ಸಹ ಶಾಸಕ ಸದನಕ್ಕೆ ವಿವರಿಸಿದರು.

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಉಗ್ರವಾಗಿ ಟೀಕಿಸುತ್ತಿದ್ದರೆ ಅವರ ಪಕ್ಷದ ಹಿರಿಯ ನಾಯಕ ಮತ್ತು ಮುಖ್ಯಮಂತ್ರಿಯವರ ಆಪ್ತರೆನಿಸಿಕೊಂಡಿರುವ ಜಿಟಿ ದೇವೇಗೌಡ (GT Devegowda) ಅನ್ನಭಾಗ್ಯ ಯೋಜನೆಯನ್ನು ಇಂದು ವಿಧಾನ ಸಭೆಯಲ್ಲಿ ಮನಸಾರೆ ಕೊಂಡಾಡಿದರು. ಸಿದ್ದರಾಮಯ್ಯ ಮತ್ತು ತನ್ನ ಕುಟುಂಬಕ್ಕೆ ಬಡತನ ಮತ್ತು ಅಕ್ಕಿಯ ಮಹತ್ವ ಚೆನ್ನಾಗಿ ಗೊತ್ತಿದೆ, ಮುಖ್ಯಮಂತ್ರಿಯವರೇ ಹೇಳಿಕೊಂಡಿರುವ ಹಾಗೆ ಅವರ ತಾಯಿ ಕೇವಲ ಶನಿವಾರಕ್ಕೊಮ್ಮೆ ಅನ್ನ ಮಾಡಿ ಮಕ್ಕಳಿಗೆ ತಿನ್ನಿಸುತ್ತಿದ್ದರಂತೆ, ಆ ಸ್ಥಿತಿ ರಾಜ್ಯದ ಬಡವರು ಮತ್ತು ಶ್ರಮಿಕ ವರ್ಗದವರು ಅನುಭವಿಸಬಾರದೆಂಬ ಕಾಳಜಿಯಿಂದ ಅವರು 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು ಎಂದು ಜಿಟಿಡಿ ಹೇಳಿದರು. 1966 ರಲ್ಲಿ ದೇಶದೆಲ್ಲೆಡೆ ಭೀಕರ ಬರಗಾಲ ಆವರಿಸಿದಾಗ ಮತ್ತು ತಂದೆ ಅದೇ ಸಮಯದಲ್ಲಿ ತೀರಿಕೊಂಡಾಗ ತಮ್ಮ ಕುಟುಂಬ ಅನುಭವಿಸಿದ ಕಷ್ಟವನ್ನು ಸಹ ಶಾಸಕ ಸದನಕ್ಕೆ ವಿವರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ