Assembly Session; ಕನ್ನಡ ಶಾಲೆಗಳ ಕ್ಲಾಸ್ ರೂಮುಗಳನ್ನು ಸಬಲೀಕರಿಸಿದರೆ ಬಹಳಷ್ಟು ಬದಲಾವಣೆಯಾಗಲಿದೆ: ಪ್ರದೀಪ್ ಈಶ್ವರ್

Assembly Session; ಕನ್ನಡ ಶಾಲೆಗಳ ಕ್ಲಾಸ್ ರೂಮುಗಳನ್ನು ಸಬಲೀಕರಿಸಿದರೆ ಬಹಳಷ್ಟು ಬದಲಾವಣೆಯಾಗಲಿದೆ: ಪ್ರದೀಪ್ ಈಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 12, 2023 | 1:49 PM

ತಾವು ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಎರಡು ಭಾರತ ರತ್ನ ಮತ್ತು ಮೂರು ಪದ್ಮಶ್ರೀ ಪ್ರಶಸ್ತಿಗಳು ಸಿಕ್ಕಿರುವುದನ್ನು ಶಾಸಕ ಹೆಮ್ಮೆಯಿಂದ ಹೇಳಿಕೊಂಡರು.

ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಚೆನ್ನಾಗಿ ಮಾತಾಡುತ್ತಾರೆ ಅಂತ ಎಲ್ಲರಿಗೂ ಗೊತ್ತಿದೆ. ಇವತ್ತು ವಿಧಾನಸಭಾ ಅಧಿವೇಶನದಲ್ಲಿ ಅವರು ತಮ್ಮ ವಾಕ್ಚಾತುರ್ಯದ ಮತ್ತೊಂದು ನಿದರ್ಶನ ಒದಗಿಸಿದರು. ಬಡತನ ಕುರಿತು ಮಾತು ಅರಂಭಿಸುವ ಶಾಸಕ, ತನ್ನಂಥ ಬಡವರಿಗೆ ಅಕ್ಕಿ ಎಂದರೆ ದೇವರು ಅಂತ ಹೇಳಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಧನ್ಯವಾದ ಸಲ್ಲಿಸಿದರು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಬೇಕೆಂದ ಪ್ರದೀಪ್, ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ (APJ Abdul Kalam) ಅವರು ಹೇಳಿದ, destiny of the nation shapes in classrooms ಮಾತನ್ನು ಉಲ್ಲೇಖಿಸಿ ಕನ್ನಡ ಶಾಲಾ ಕಾಲೇಜುಗಳ ಕ್ಲಾಸ್ ರೂಮುಗಳನ್ನು ಸಬಲೀಕರಣಗೊಳಿಸುವ ಅವಶ್ಯಕತೆಯಿದೆ ಎಂದರು. ತಪ್ಪಾಗಿ ಮಾತಾಡಲು ಇಂಗ್ಲಿಷ್ ಬಳಸಬಹುದು ಅದರೆ ಕನ್ನಡದಲ್ಲಿ ತಪ್ಪಿಲ್ಲದಂತೆ ಮಾತಾಡಬಹುದು ಎಂದು ಪ್ರದೀಪ್ ಹೇಳಿದರು. ತಾವು ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಎರಡು ಭಾರತ ರತ್ನ ಮತ್ತು ಮೂರು ಪದ್ಮಶ್ರೀ ಪ್ರಶಸ್ತಿಗಳು ಸಿಕ್ಕಿರುವುದನ್ನು ಶಾಸಕ ಹೆಮ್ಮೆಯಿಂದ ಹೇಳಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ