ಬಿಪಿಎಲ್ ಕಾರ್ಡುಗಳನ್ನು ಮೊದಲಿದ್ದ ಹಾಗೆ ಬಡವರಿಗೆ ಹಿಂತಿರುಗಿಸದಿದ್ದರೆ ಉಗ್ರ ಹೋರಾಟ: ಆರ್​. ಅಶೋಕ

| Updated By: Digi Tech Desk

Updated on: Nov 21, 2024 | 4:01 PM

ಬಡವರಿಗೆ ಅನ್ನ ಕೊಡಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 2 ಕೋಟಿ ಖರ್ಚು ಮಾಡಿ ತಮ್ಮ ಕಚೇರಿಯನ್ನು ರಿನೋವೇಟ್ ಮಾಡಿಸಿಕೊಳ್ಳುತ್ತಾರೆ, ಸಚಿವರ ಬಂಗ್ಲೆಗಳ ಸೌಂದರ್ಯೀಕರಣಕ್ಕಾಗಿ ₹ 40-50 ಕೋಟಿ ಖರ್ಚು ಮಾಡಲಾಗಿದೆ, ಬಿಪಿಎಲ್ ಕಾರ್ಡ್ ರದ್ದು ಕೆಲಸ ನಿಲ್ಲದೆ ಹೋದರೆ, ವಿಧಾನಸೌಧವೂ ಸೇರಿದಂತೆ ಎಲ್ಲ ಸರ್ಕಾರೀ ಕಚೇರಿಗಳಿಗೆ ಬೀಗ ಜಡಿಯಲಾಗುವುದು ಎಂದು ಅಶೋಕ ಹೇಳಿದರು.

ಬೆಂಗಳೂರು: ಬಿಪಿಎಲ್ ಕಾರ್ಡ್ ಗಳನ್ನು ಸರ್ಕಾರ ರದ್ದು ಮಾಡಿರುವ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ ನೇತೃತ್ವದಲ್ಲಿ ಬಿಜೆಪಿ ಅಭಿಯಾನ ಮುಂದುವರಿದಿದೆ. ಜಯನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಶೋಕ, ಬಂಡಾಯವೆದ್ದಿರುವ ಶಾಸಕರ ಕ್ಷೇತ್ರಗಳಿಗೆ ಅನುದಾನ ಒದಗಿಸಲು ಸರ್ಕಾರ ಬಿಪಿಎಲ್ ಕಾರ್ಡ್​ಗಳನ್ನು ರದ್ದು ಮಾಡುವ ಕೆಲಸ ಶುರುಮಾಡಿದೆ, ಆದರೆ ನಾವು ಸರ್ಕಾರಕ್ಕೆ ಎಚ್ಚರಿಕೆ ಕೊಡ್ತೇವೆ, ವಿಧಾನಸಭೆಯ ಚಳಿಗಾಲದ ಅಧಿವೇಶನ ಶುರುವಾಗುವ ಮೊದಲು ರದ್ದು ಮಾಡಿರುವ ಬಿಪಿಎಲ್ ಕಾರ್ಡ್​​ಗಳನ್ನು ಬಡವರಿಗೆ ಮೊದಲಿಬ ಸ್ಥಿತಿಯಲ್ಲಿ ವಾಪಸ್ಸು ಮಾಡಬೇಕು, ಹೊಸದಾಗಿ ಅರ್ಜಿ ಸಲ್ಲಿಸುವಂತೆ ಹೇಳಬಾರದು, ಇದನ್ನು ಸರ್ಕಾರ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ

Published on: Nov 21, 2024 03:59 PM