‘ಓಂ ಸಿನಿಮಾ ಟೈಮ್ನಲ್ಲಿ ನನಗೆ ಬೈಯ್ಯುತ್ತಿದ್ರು’; ಆ ದಿನಗಳನ್ನು ಮೆಲುಕು ಹಾಕಿದ ನಟಿ ಪ್ರೇಮಾ
‘ಓಂ’ ಸಿನಿಮಾ ನಿರ್ದೇಶಿಸಿದ ಉಪೇಂದ್ರ, ‘ನಮ್ಮೂರ ಮಂದಾರ ಹೂವೇ’ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಮುಂತಾದವರ ಕಾರ್ಯವೈಖರಿ ಕುರಿತು ಪ್ರೇಮಾ ಮಾತನಾಡಿದ್ದಾರೆ. ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು ನಟಿ ಪ್ರೇಮಾ (Actress Prema). ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ನಾಯಕಿಯಾದ ಖ್ಯಾತಿ ಅವರಿಗೆ ಸಲ್ಲುತ್ತದೆ. ‘ಓಂ’, ‘ನಮ್ಮೂರ ಮಂದಾರ ಹೂವೇ’ ರೀತಿಯ ಅತ್ಯುತ್ತಮ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಅವರು ಚಿತ್ರಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಈಗ ಪ್ರೇಮಾ ನಟಿಸಿರುವ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾ (Wedding Gift Kannada Movie) ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಚಿತ್ರದ ಸುದ್ದಿಗೋಷ್ಠಿ ಸಮಯದಲ್ಲಿ ಅವರು ತಮ್ಮ ಹಳೇ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಕಲಾವಿದರ ಬದುಕಿನಲ್ಲಿ ನಿರ್ದೇಶಕರು ಎಷ್ಟು ಮುಖ್ಯ ಎಂಬುದನ್ನು ಅವರು ವಿವರಿಸಿದ್ದಾರೆ. ‘ಓಂ’ (Om Kannada Movie) ಸಿನಿಮಾ ನಿರ್ದೇಶಿಸಿದ ಉಪೇಂದ್ರ, ‘ನಮ್ಮೂರ ಮಂದಾರ ಹೂವೇ’ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಮುಂತಾದ ನಿರ್ದೇಶಕರ ಕಾರ್ಯವೈಖರಿ ಕುರಿತು ಪ್ರೇಮ ಮಾತನಾಡಿದ್ದಾರೆ. ‘ಓಂ ಸಿನಿಮಾದಲ್ಲಿ ನನಗೆ ಏನೂ ಗೊತ್ತಿರಲಿಲ್ಲ. ಬೈಯ್ತಾನೆ ಇದ್ದರು. ಆದರೆ ಬೈಯ್ಯುವುದರಲ್ಲೂ ಅರ್ಥ ಇತ್ತು ಅನ್ನೋದು ಸಿನಿಮಾ ನೋಡಿದ ಬಳಿಕ ತಿಳಿಯಿತು’ ಎಂದಿದ್ದಾರೆ ಪ್ರೇಮಾ.
ಇದನ್ನೂ ಓದಿ:
ನಟಿ ಪ್ರೇಮಾ ‘ವೆಡ್ಡಿಂಗ್ ಗಿಫ್ಟ್’ ಒಪ್ಪಿಕೊಂಡಿದ್ದು ಯಾಕೆ? ಈಗ ಏನಾಗಿದೆ ಅದರ ಕಥೆ?
‘ಪುನೀತ್ ಬಹಳ ಶ್ರಮಜೀವಿ, ಅವರೊಂದಿಗೆ ಡಾನ್ಸ್ ಮಾಡಬೇಕು ಎಂಬ ಕನಸಿತ್ತು’; ಅಪ್ಪು ಸ್ಮರಿಸಿದ ನಟಿ ಪ್ರೇಮಾ