Weekly Horoscope: ಜುಲೈ 28 ರಿಂದ ಆಗಸ್ಟ್​ 03 ರವರೆಗಿನ ವಾರ ಭವಿಷ್ಯ

Updated on: Jul 27, 2025 | 7:00 AM

ಡಾ. ಬಸವರಾಜ್ ಗುರೂಜಿ ಅವರು ಜುಲೈ 28 ರಿಂದ ಆಗಸ್ಟ್​ 03 ರವರೆಗಿನ ವಾರ ರಾಶಿ ಭವಿಷ್ಯವನ್ನು ತಿಳಿಸಿದ್ದಾರೆ. ಮೇಷ ಮತ್ತು ವೃಷಭ ರಾಶಿಯವರಿಗೆ ಈ ವಾರ ಅನುಕೂಲಕರವಾಗಿದೆ. ಆರ್ಥಿಕ ಲಾಭ, ಆರೋಗ್ಯ ಸುಧಾರಣೆ ಮತ್ತು ಹೊಸ ಯೋಜನೆಗಳಿಗೆ ಅವಕಾಶಗಳಿವೆ. ಗ್ರಹಗಳ ಸ್ಥಾನಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಜುಲೈ 28ರಿಂದ ಆಗಸ್ಟ್ 3ರ ವಾರದ ರಾಶಿ ಫಲಗಳನ್ನು ತಿಳಿಸಿದ್ದಾರೆ. ಮೇಷ ರಾಶಿಯವರಿಗೆ ಈ ವಾರ 6-7 ಗ್ರಹಗಳ ಅನುಗ್ರಹವಿದೆ. ಆರ್ಥಿಕ ಲಾಭ, ವ್ಯವಹಾರಗಳಲ್ಲಿ ಯಶಸ್ಸು, ಆರೋಗ್ಯ ಸುಧಾರಣೆ ಮತ್ತು ಹೊಸ ಯೋಜನೆಗಳಿಗೆ ಅವಕಾಶಗಳಿವೆ. ಆದರೆ, ಹಿತಶತ್ರುಗಳ ಕಾಟ ಮತ್ತು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರಬಹುದು. ವೃಷಭ ರಾಶಿಯವರಿಗೂ 5-6 ಗ್ರಹಗಳ ಶುಭಫಲವಿದೆ. ಆರ್ಥಿಕ ಯೋಗ ಉತ್ತಮವಾಗಿದೆ. ಆದರೆ, ನಂಬಿಕೆ ದ್ರೋಹದ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಕಾರ್ಯಕ್ರಮದಲ್ಲಿ ಈ ವಾರದ ಪ್ರಮುಖ ತಿಥಿಗಳು ಮತ್ತು ಹಬ್ಬಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More