ಜಾಮೀನು ಸಿಕ್ಕಿರುವುದಕ್ಕೆ ಜೈಲಿನಲ್ಲಿರುವ ರೇವಣ್ಣ ಹೇಳಿದ್ದೇನು?
ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರು ಮಾಡಲಾಗಿದೆ. ಜಾಮೀನು ಸಿಗುವುದಕ್ಕೂ ಮುಂಚೆ ಇಂದು ರೇವಣ್ಣ ಭೇಟಿಗೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು ಆಗಮಿಸಿದ್ದರು. ನಾಲ್ವರು ಸ್ನೇಹಿತರ ಜತೆ ಭೇಟಿ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿರಪರಾಧಿಗೆ ಶಿಕ್ಷೆ ಆಗಿದೆ ಎಂದು ಹೆಚ್.ಡಿ.ರೇವಣ್ಣ ಅವರು ಬಹಳ ಬೇಸರಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಆನೇಕಲ್, ಮೇ 13: ಸದ್ಯ ಹೆಚ್ಡಿ ರೇವಣ್ಣಗೆ (HD Revanna) ಜಾಮೀನು ಸಿಕ್ಕಿದೆ. ಜಾಮೀನು ಸಿಗುವುದಕ್ಕೂ ಮುಂಚೆ ಇಂದು ರೇವಣ್ಣ ಭೇಟಿಗೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು (HT Manju) ಆಗಮಿಸಿದ್ದರು. ನಾಲ್ವರು ಸ್ನೇಹಿತರ ಜತೆ ಭೇಟಿ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ರೇವಣ್ಣ ಅವರು ಬಹಳ ಬೇಸರಗೊಂಡಿದ್ದಾರೆ. ನಿರಪರಾಧಿಗೆ ಶಿಕ್ಷೆ ಆಗಿದೆ ಎಂದು ಬೇಸರಗೊಂಡಿದ್ದರು. ಮನಸ್ಸಿನಲ್ಲಿದ್ದ ನೋವು ನನ್ನ ಬಳಿ ಹೇಳಿಕೊಂಡಿದ್ದಾರೆ. ಜಾಮೀನು ಸಿಕ್ಕಿದ್ದಕ್ಕೆ ರೇವಣ್ಣ ಅವರು ಖುಷಿ ಪಟ್ಟರು ಎಂದು ಹೇಳಿದ್ದಾರೆ. ಜಾಮೀನು ಮಂಜೂರು ಬಗ್ಗೆ ಜೈಲು ಸಿಬ್ಬಂದಿಯಿಂದ ಮಾಹಿತಿ ತಿಳಿಯುತ್ತಿದ್ದಂತೆ ದೇವರಿಗೆ ಧನ್ಯವಾದ ತಿಳಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.