ಸಿನಿಮಾದಿಂದ ರಾಜಕೀಯದ ತನಕ: ಟಿವಿ9 ವೇದಿಕೆಯಲ್ಲಿ ಅನೇಕ ವಿಚಾರ ಹಂಚಿಕೊಂಡ ಕಂಗನಾ

|

Updated on: Feb 26, 2024 | 9:28 PM

ಟಿವಿ9 ನೆಟ್​ವರ್ಕ್​ ಆಯೋಜಿಸಿದ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’ ಸಂವಾದದಲ್ಲಿ ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾಗಳ ವಿಚಾರದಿಂದ ಆರಂಭವಾಗಿ ಲೋಕಸಭಾ ಚುನಾವಣೆ ತನಕ ಅನೇಕ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ಕಂಗನಾ ಜೊತೆ ನಡೆದ ಸಂವಾದದ ವಿಡಿಯೋ ಇಲ್ಲಿದೆ..

ಜನಪ್ರಿಯ ನಟಿ ಕಂಗನಾ ರಣಾವತ್​ (Kangana Ranaut) ಅವರು ರಾಜಕೀಯಕ್ಕೆ ಎಂಟ್ರಿ ನೀಡುತ್ತಾರಾ ಎಂಬ ಪ್ರಶ್ನೆ ಹಲವರಲ್ಲಿದೆ. ಈ ಪ್ರಶ್ನೆಯನ್ನು ಇನ್ನಷ್ಟು ಬಲವಾಗಿಸುವ ರೀತಿಯಲ್ಲಿ ಕಂಗನಾ ರಣಾವತ್​ ಅವರು ಒಂದು ದೊಡ್ಡ ಸುಳಿವು ನೀಡಿದ್ದಾರೆ. ತಾವು ರಾಜಕೀಯಕ್ಕೆ ಬರಲು ಇದು ಸರಿಯಾದ ಸಮಯ ಎಂದು ಅವರು ಹೇಳಿದ್ದಾರೆ. ಟಿವಿ9 ಆಯೋಜಿಸಿರುವ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’ (What India Thinks Today) ಕಾನ್​ಕ್ಲೇವ್​ನಲ್ಲಿ ಅವರು ಭಾಗಿ ಆಗಿದ್ದಾರೆ. ಈ ವೇಳೆ ಅವರು ತಮ್ಮ ಸಿನಿಮಾ ಜರ್ನಿಯನ್ನು ಮೆಲುಕು ಹಾಕಿದ್ದಾರೆ. ಇಂದು ಭಾರತದ ಚಿತ್ರರಂಗ ಯಾವ ರೀತಿಯಲ್ಲಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಒಟಿಟಿ ಪ್ಲಾಟ್​ಫಾರ್ಮ್​ಗಳ ಬಗ್ಗೆಯೂ ಕಂಗನಾ ರಣಾವತ್​ ಮಾತನಾಡಿದ್ದಾರೆ. ಬಾಲಿವುಡ್​ (Bollywood) ಮತ್ತು ದಕ್ಷಿಣ ಭಾರತದಲ್ಲಿ ತಮಗೆ ಸಿಕ್ಕ ಅವಕಾಶಗಳ ಬಗ್ಗೆ ಅವರು ಮನಸಾರೆ ಮಾತನಾಡಿದ್ದಾರೆ. ನಟಿಯಾಗಿ, ನಿರ್ದೇಶಕಿಯಾಗಿ ಮತ್ತು ನಿರ್ಮಾಪಕಿಯಾಗಿ ಕೂಡ ಅವರು ಸಕ್ರಿಯರಾಗಿದ್ದಾರೆ. ಟಿವಿ9 ವೇದಿಕೆಯಲ್ಲಿ ಕಂಗನಾ ರಣಾವತ್​ ಮಾತನಾಡಿದ ಪೂರ್ತಿ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.