Loading video

ಸಂವಿಧಾನ ಪೀಠಿಕೆ: ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ರಲ್ಲಿ ತಪ್ಪೇನಿದೆ? ಸಿಟಿ ರವಿ

Updated on: Jun 28, 2025 | 5:40 PM

ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್​ಗೆ ಇರುವ ಬದ್ಧತೆ ಏನು? ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್ ಪಂಚನಾಮಗಳನ್ನು ಪಂಚತೀರ್ಥಗಳಾಗಿ ಅಭಿವೃದ್ಧಿಪಡಿಸಿದ್ದಾರೆ, ಕಾಂಗ್ರೆಸ್ ಏನು ಮಾಡಿದೆ? ಕಾಂಗ್ರೆಸ್ ದುರ್ಬಲಗೊಂಡು ಬಿಜೆಪಿ, ಎಸ್​ಪಿ ಮೊದಲಾದ ಪಕ್ಷಗಳು ಪ್ರಬಲಗೊಂಡ ಬಳಿಕವೇ ಅಂಬೇಡ್ಕರ್ ಅವರು ಹಾಕಿದ ಪರಂಪರೆಗೆ ಗೌರವ ಸಿಕ್ಕಿದೆ ಮತ್ತು ಸ್ಮಾರಕಗಳು ತಲೆಯೆತ್ತಿವೆ ಎಂದು ರವಿ ಹೇಳಿದರು.

ಬೆಂಗಳೂರು, ಜೂನ್ 28: ತುರ್ತು ಪರಿಸ್ಥಿತಿ ಸಮಯದಲ್ಲಿ ಕಾಂಗ್ರೆಸ್ ಸಂವಿಧಾನದ ಪೀಠಿಕೆಯನ್ನು ತಿರುಚಿರುವುದಕ್ಕೆ ಸಂಬಂಧಿಸಿದಂತೆ ಚರ್ಚೆಯಾಗಲಿ ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಸಿಟಿ ರವಿ ಪ್ರಶ್ನಿಸಿದರು. ಡಾ ಬಿಆರ್ ಅಂಬೇಡ್ಕರ್ (Dr BR Ambedkar) ಬದುಕಿದ್ದಾಗ ಕಾಂಗ್ರೆಸ್ ಅವರನ್ನು ಗೌರವಿಸಲಿಲ್ಲ, ಚುನಾವಣೆಯಲ್ಲಿ ಸೋಲುವಂತೆ ಮಾಡಿತು, ಅವರು ಸತ್ತಾಗಲೂ ದೇಹವನ್ನು ಸಮಾಧಿ ಮಾಡಲು ದೆಹಲಿಯಲ್ಲಿ ಸ್ಥಳ ನೀಡಲಿಲ್ಲ. ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಗಳಾಗಿದ್ದಾಗ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಮನಸ್ಸು ಮಾಡಲಿಲ್ಲ ಎಂದು ರವಿ ಖಾರವಾಗಿ ಹೇಳಿದರು.

ಇದನ್ನೂ ಓದಿ:  ನಂದಿನಿ ಮತ್ತು ಅಮುಲ್ ರೈತರು ಹುಟ್ಟುಹಾಕಿರುವ ಸಂಸ್ಥೆಗಳು, ಎರಡೂ ನಮ್ಮವೇ: ಸಿಟಿ ರವಿ, ಬಿಜೆಪಿ ಎಮ್ಮೆಲ್ಸಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ