ಒಳ ಮೀಸಲಾತಿಯನ್ನು ವಿರೋಧಿಸುತ್ತೀರಾ ಅಂತ ಕೇಳಿದಾಗಿ ಸಿಡಿದ ಪರಮೇಶ್ವರ್ ಯಾರು ಹೇಳಿದ್ದು ಅಂದರು!
ರಾಹುಲ್ ಗಾಂಧಿಯವರು ಬಿಹಾರ ಚುನಾವಣೆಗೋಸ್ಕರ ಯಾವುದನ್ನೂ ಮಾಡುತ್ತಿಲ್ಲ, ಮುಂದೆ ಬೇರೆ ಬೇರೆ ರಾಜ್ಯಗಳ ಮತ್ತು ಲೋಕಸಭಾ ಚುನಾವಣೆ ಕೂಡ ಬರಲಿದೆ, ಎಲ್ಲಾದಕ್ಕೂ ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ, ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆಯೀ ಇಲ್ಲವೋ ಗೊತ್ತಿಲ್ಲ, ಈಗ ಅವರು ಲೋಕಸಭಾ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ತುಮಕೂರು, ಆಗಸ್ಟ್ 9: ಗೃಹ ಸಚಿವ ಜಿ ಪರಮೇಶ್ವರ್ ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡುವಾಗ, ಒಳ ಮೀಸಲಾತಿಗೆ (internal reservation) ತಮ್ಮ ವಿರೋಧ ಇದೆಯಂತೆ ಅಂತ ಕೇಳಿದ ಪ್ರಶ್ನೆಗೆ ಸಿಟ್ಟಿಗೆದ್ದರು. ಯಾವನು ನಿಮಗೆ ಹೇಳಿದ್ದು, ನೀವು ಕೇಳುತ್ತಿರುವ ಪ್ರಶ್ನೆಯ ಮೂಲ ಏನು? ನಿಮ್ಮ ಪ್ರಶ್ನೆಗೊಂದು ಮೂಲ ಮಾಹಿತಿ ಇರಬೇಕೆಲ್ಲ, ಆ ಮೂಲ ಯಾವುದು ಅಂತ ಹೇಳಿ; ಆಧಾರವಿಲ್ಲದ, ಬಾಲಿಶ ಪ್ರಶ್ನೆಗಳನ್ನು ಕೇಳಬೇಡಿ ಎಂದು ಕೋಪದಲ್ಲಿ ಹೇಳಿದರು. ಒಳ ಮೀಸಲಾತಿ ಬೇಕೆಂದು ಹೇಳಿದ್ದು ನಾವು, ನಮ್ಮ ಪಕ್ಷದ ಪ್ರಣಾಳಿಕೆಯನ್ನು ನಾನೇ ಬರೆದಿದ್ದು, ಚಿತ್ರದುರ್ಗ ಡಿಕ್ಲರೇಷನ್ ಮಾಡಿದ್ದೇವೆ, ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ, ನಾರಾಯಣಸ್ವಾಮಿ ಏನಾದರೂ ಹೇಳಿದ್ದರೆ ಅವರನ್ನೇ ಕೇಳಿ, ನಾನು ಹೇಗೆ ಒಳ ಮೀಸಲಾತಿಯನ್ನು ವಿರೋಧ ಮಾಡಲು ಸಾಧ್ಯ ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: ಹೈಕಮಾಂಡ್ ನಮಗೆ ಬ್ರೇಕ್ ಹಾಕೋಕೆ ಆಗಲ್ಲ: ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

