ಪ್ರಜ್ವಲ್ ತಪ್ಪಿತಸ್ಥ ಅಂತ ಕೋರ್ಟ್ ತೀರ್ಪು ನೀಡಿದ ಬಳಿಕ ತಾನು ಹೇಳೋದೇನಿರುತ್ತದೆ? ಸುಮಲತಾ ಅಂಬರೀಶ್

Updated on: Aug 01, 2025 | 5:40 PM

ಪ್ರಕರಣದ ಎಲ್ಲ ಅಂಶಗಳನ್ನು ಗಮನಿಸಿಯೇ ಜನಪ್ರತಿನಿಧಿಗಳ ಕೋರ್ಟ್ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿರುತ್ತದೆ, ಕೋರ್ಟ್ ಮಾತಾಡಿರುವುದರಿಂದ ತಾನು ಮಾತಾಡುವುದರಲ್ಲಿ ಅರ್ಥವಿರುವುದಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದರು. ಕಾಂಗ್ರೆಸ್ ನಾಯಕರನ್ನು ಹೊರತುಪಡಿಸಿ, ಬಿಜೆಪಿ ನಾಯಕರಾಗಲೀ, ಜೆಡಿಎಸ್ ಮುಖಂಡರಾಗಲೀ ಪ್ರಜ್ವಲ್ ಪ್ರಕರಣದ ತೀರ್ಪಿನ ಬಗ್ಗೆ ಕಾಮೆಂಟ್ ಮಾಡುತ್ತಿಲ್ಲ.

ಮಂಡ್ಯ, ಆಗಸ್ಟ್ 1: ಕೆಆರ್ ನಗರ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ಎಂದು ತೀರ್ಪು ಪ್ರಕಟಿಸಿ ಸುಮಾರು ಹೊತ್ತಾಗಿದ್ದರೂ ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ವಿಷಯ ಗೊತ್ತಾಗಿಲ್ಲ. ಈಗ ಮಾಧ್ಯಮದವರು ಹೇಳಿದ ನಂತರವೇ ಅದು ಗೊತ್ತಾಗಿದ್ದು ಎಂದು ಸುಮಲತಾ ಹೇಳಿದರು. ಕೋರ್ಟೇ ತೀರ್ಪು ನೀಡಿದ ಬಳಿಕ ನಾನು ಹೇಳೋದೇನಿರುತ್ತೆ? ಕೋರ್ಟ್ ತೀರ್ಪು ಎಂದರೆ ಮುಗೀತು, ಎಲ್ಲರೂ ಅದರ ಆದೇಶವನ್ನು ಪಾಲಿಸಬೇಕು, ಇದು ಕೋರ್ಟ್ ನೀಡಿರುವ ಆದೇಶ ಮತ್ತು ಅದರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲದೆ ಕಾರಣ ಕಾಮೆಂಟ್ ಮಾಡಲಾರೆ ಎಂದು ಸುಮಲತಾ ಅಂಬರೀಷ್ ಹೇಳಿದರು.

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ದೋಷಿ: ಈ ಪ್ರಕರಣದಲ್ಲಿ ಹೊಸ ದಾಖಲೆ ಬರೆದ ಜನಪ್ರತಿನಿಧಿಗಳ ವಿಶೇಷ ಕೋರ್ಟ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 01, 2025 04:59 PM