ನಮ್ಮ ದೇಶದ ಮೇಲೆ ಸಾಲ ಎಷ್ಟಿದೆ ಅಂತ ಪ್ರಲ್ಹಾದ್ ಜೋಶಿಯವರಿಗೆ ಗೊತ್ತಾ? ಸಂತೋಷ್ ಲಾಡ್, ಕಾರ್ಮಿಕ ಸಚಿವ

|

Updated on: Feb 24, 2024 | 2:00 PM

ಚುನಾವಣೆ ಹತ್ತಿರ ಬಂದಾಗಲೆಲ್ಲ ಹೆಗಡೆ ಹಿಂದೂ-ಮುಸ್ಲಿಂ ಶುರುಮಾಡುತ್ತಾರೆ, ನಮ್ಮ ದೇಶದಲ್ಲಿ ಚಾರಿಟಿಗೆ ಅತಿಹೆಚ್ಚು ದಾನ ಮಾಡಿದವರು ಅಜೀಂ ಪ್ರೇಮ್ ಜೀ, 29 ಬಿಲಿಯನ್ ಡಾಲರ್ ಹಣವನ್ನು ಅವರು ದೇಣಿಗೆ ರೂಪದಲ್ಲಿ ನೀಡಿದ್ದಾರೆ, ಅವರು ಯಾವ ಸಮುದಾಯದವರು ಅಂತ ಹೆಗಡೆಗೆ ಗೊತ್ತಾ ಎಂದು ಲಾಡ್ ಪ್ರಶ್ನಿಸಿದರು.

ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ರಾಜ್ಯದ ಆರ್ಥಿಕ ಸ್ಥಿತಿ ಹಳ್ಳ ಹಿಡಿದಿದೆ ಕೆರೆ ಹಿಡಿದಿದೆಯೋ ಅಂತ ಕೇಂದ್ರ ಸಚಿವ ಪ್ರ ಲ್ಹಾದ್ ಜೋಶಿ  (Pralhad Joshi) ವ್ಯಾಖ್ಯಾನಿಸಬೇಕು, ಆದರೆ ಅದಕ್ಕೂ ಮೊದಲು ಅವರು ನಮ್ಮ ದೇಶದ ಮೇಲೆ ಸಾಲ ಎಷ್ಟಿದೆ ಅಂತ ಹೇಳಲಿ, ಮಾಧ್ಯಮದವರು ಯಾಕೆ ಈ ಪ್ರಶ್ನೆಯನ್ನು ಜೋಶಿಯವರಿಗೆ ಕೇಳಬಾರದು ಅಂತ ಹೇಳಿದರು. ಕಾರವಾರದಲ್ಲಿ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde), ಸಿದ್ದರಾಮಯ್ಯ ಸರ್ಕಾರ ದಿವಾಳಿಯೆದ್ದಿದೆ, ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಹ ದುಡ್ಡಿಲ್ಲ, ಮಟ್ಕಾದಲ್ಲಿ ಬರೆಯುವ ಚೀಟಿಗೆ ಬೆಲೆಯಿದೆ, ಒಂದು ರೂಪಾಯಿಗೆ ಅವರು 80 ರೂ. ಕೊಡುತ್ತಾರೆ, ಆದರೆ ಸಿದ್ದರಾಮಯ್ಯ ಕೇಂದ್ರಕ್ಕೆ ಬರೆಯುವ ಪತ್ರಗಳಿಗೆ ಅಷ್ಟು ಬೆಲೆಯೂ ಇಲ್ಲ ಎಂದು, ಹಿಂದೂಗಳ ತೆರಿಗೆ ಹಣವನ್ನು ಮಸೀದಿ ಚರ್ಚ್ ಗಳಿಗೆ ಕೊಡುತ್ತಾರೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಲಾಡ್, ಚುನಾವಣೆ ಹತ್ತಿರ ಬಂದಾಗಲೆಲ್ಲ ಹೆಗಡೆ ಹಿಂದೂ-ಮುಸ್ಲಿಂ ಶುರುಮಾಡುತ್ತಾರೆ, ನಮ್ಮ ದೇಶದಲ್ಲಿ ಚಾರಿಟಿಗೆ ಅತಿಹೆಚ್ಚು ದಾನ ಮಾಡಿದವರು ಅಜೀಂ ಪ್ರೇಮ್ ಜೀ, 29 ಬಿಲಿಯನ್ ಡಾಲರ್ ಹಣವನ್ನು ಅವರು ದೇಣಿಗೆ ರೂಪದಲ್ಲಿ ನೀಡಿದ್ದಾರೆ, ಅವರು ಯಾವ ಸಮುದಾಯದವರು ಅಂತ ಹೆಗಡೆಗೆ ಗೊತ್ತಾ ಎಂದು ಲಾಡ್ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ