Loading video

ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಬಣ ಬಡಿದಾಟ ನಡೆದರೆ ನಮ್ಮಲ್ಲಿ ಪಕ್ಷದ ಸಂಘಟನೆಗಾಗಿ: ನಾರಾಯಣಸ್ವಾಮಿ ಚಲವಾದಿ

|

Updated on: Feb 03, 2025 | 10:46 PM

ಬಿಜೆಪಿಯಲ್ಲಿ ನಡೆಯುತ್ತಿರುವ ಒಳಜಗಳ ಯಾವತ್ತೋ ಕೊನೆಗೊಳ್ಳಬೇಕಾಗಿತ್ತು, ಆದರೆ ಪಕ್ಷದ ವರಿಷ್ಠರು ದೆಹಲಿ ವಿಧಾನಸಭಾ ಚುನಾವಣೆ, ಬಜೆಟ್ ಅಂತೆಲ್ಲ ಬ್ಯುಸಿಯಾಗಿದ್ದರು, ಆದರೆ ಕೆಲ ದಿನಗಳ ಹಿಂದೆ ಇಲ್ಲಿಗೆ ಜೆಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾನ್ ಮತ್ತು ರಾಧಾಮೋಹನ್ ಅಗರ್ವಾಲ್ ಅವರೆಲ್ಲ ಬಂದು ಹೋಗಿದ್ದಾರೆ, ಪಕ್ಷದಲ್ಲಿನ ಬಿಕ್ಕಟ್ಟು ಶೀಘ್ರದಲ್ಲಿ ಕೊನೆಗೊಳ್ಳಲಿದೆ ಎಂದು ನಾರಾಯಣಸ್ವಾಮಿ ಹೇಳಿದರು.

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಹಾಗೆ ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಬಣ ಬಡಿದಾಟವೇನೂ ನಡೆದಿಲ್ಲ, ಪಕ್ಷದ ಅಧ್ಯಕ್ಷ ಸ್ಥಾನ ಅಧಿಕಾರದ ಸ್ಥಾನವಲ್ಲ, ಅದು ಸಂಘಟನೆಯ ಸ್ಥಾನ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ ಚಲವಾದಿ ಹೇಳಿದರು. ನಗರದಲ್ಲಿ ಮಾತಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ 60-70 ಶಾಸಕರು ಮಿನಿಸ್ಟ್ರಾಗಳಾಗಲು ಬಡಿದಾಡುತ್ತಿದ್ದಾರೆ, ಮುಖ್ಯಮಂತ್ರಿ ಸ್ಥಾನಕ್ಕೆ ಕಚ್ಚಾಟ ಅಲ್ಲಿ ಶುರುವಾಗಿದೆ, ಆದರೆ ಬಿಜೆಪಿಯಲ್ಲಿ ಸಂಘಟನೆಗಾಗಿ ಪೈಪೋಟಿ ನಡೆಯುತ್ತಿದೆ, ಯಾವುದೇ ಪಕ್ಷದ ಅಧ್ಯಕ್ಷ ಸ್ಥಾನ ಅಧಿಕಾರದ ಸ್ಥಾನವಲ್ಲ ಎಂದು ನಾರಾಯಣಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿಯಲ್ಲಿನ ಒಳಜಗಳಗಳಿಂದ ಬೇಸತ್ತ ಮುಖಂಡರು ಬೇರೆಪಕ್ಷ ನೋಡಿಕೊಂಡರೆ ಆಶ್ಚರ್ಯವಿಲ್ಲ: ಸೋಮಶೇಖರ್