ಮರಾಠಿಗರನ್ನು ಮೆಚ್ಚಿಸುವ ಭರದಲ್ಲಿ ಕನ್ನಡಗರಿಂದ ಲೇವಡಿಗೊಳಗಾದರು ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್
ಅಂಜಲಿ ಅವರ ಕನ್ನಡ ಉಚ್ಚಾರಣೆ ಸ್ಪಷ್ಟವಾಗಿಲ್ಲ, ಕನ್ನಡವನ್ನು ಕನ್ನಡ್, ಮಾಧ್ಯಮವನ್ನು ಮಾಧ್ಯಮ್ ಅನ್ನುತ್ತಾರೆ. ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿ ನೆಟ್ಟಿಗರಿಂದ ಲೇವಡಿಗೊಳಗಾಗಿದ್ದಾರೆ. ಕರ್ನಾಟಕದ ಗ್ರಾಮ ವನ್ ಕೇಂದ್ರಗಳಲ್ಲಿ ಮರಾಠಿಯಲ್ಲಿ ಮಾಹಿತಿ ನೀಡುವ ಅವಶ್ಯಕತೆ ಏನಿದೆ?
ಖಾನಾಪುರ ಕಾಂಗ್ರೆಸ್ ಪಕ್ಷದ ಶಾಸಕಿ ಅಂಜಲಿ ನಿಂಬಾಳ್ಕರ್ (Anjali Nimbalkar) ಅವರು ಈಗಲೇ ಮುಂದಿನ ವಿಧಾನ ಸಭೆ ಚುನಾವಣೆ ತಯಾರಿ ನಡೆಸಿರುವಂತಿದೆ. ಬೆಳಗಾವಿಯಲ್ಲಿ (Belagavi) ಸೋಮವಾರ ನಡೆಸಿದ ಸಭೆಯೊಂದರಲ್ಲಿ ಅವರು ತಮ್ಮ ಮರಾಠಿ ಭಾಷಾ ಪ್ರೇಮವನ್ನು ಮೆರೆದರು. ಗ್ರಾಮ್ ವನ್ ಕೇಂದ್ರಗಳ (Grama One Centres) ಸೂಚನಾ ಫಲಕಗಳ ಮೇಲೆ ಕನ್ನಡದ ಜೊತೆ ಮರಾಠಿಯಲ್ಲೂ ಮಾಹಿತಿ ಬರೆಯಬೇಕೆಂದು ಅವರು ಅಧಿಕಾರಿಗಳನ್ನು ಆಗ್ರಹಿಸಿದರು. ಅವರ ಮಾತಿಗೆ ಅಲ್ಲಿ ನೆರೆದಿದ್ದ ಬೆರಳೆಣಿಕೆಯಷ್ಟು ಜನ ಚಪ್ಪಾಳೆ ತಟ್ಟಿದರು. ಅಂಜಲಿ ಅವರ ಮರಾಠಿ ಪ್ರೇಮ ಕನ್ನಡಿಗರಲ್ಲಿ ಅಚ್ಚರಿಯೇನೂ ಮೂಡಿಸದು. ಯಾಕೆಂದರೆ ವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಅವರು ಹುಟ್ಟಿದ್ದು, ಬೆಳೆದಿದ್ದು ಮತ್ತು ಓದಿದ್ದು ಮಹಾರಾಷ್ಟ್ರನಲ್ಲಿ! ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಮದುವೆಯಾದ ಮೇಲೆ ಅವರು ಕರ್ನಾಟಕ ಬಂದಿದ್ದು.
ಅಂಜಲಿ ಅವರ ಕನ್ನಡ ಉಚ್ಚಾರಣೆ ಸ್ಪಷ್ಟವಾಗಿಲ್ಲ, ಕನ್ನಡವನ್ನು ಕನ್ನಡ್, ಮಾಧ್ಯಮವನ್ನು ಮಾಧ್ಯಮ್ ಅನ್ನುತ್ತಾರೆ. ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿ ನೆಟ್ಟಿಗರಿಂದ ಲೇವಡಿಗೊಳಗಾಗಿದ್ದಾರೆ. ಕರ್ನಾಟಕದ ಗ್ರಾಮ ವನ್ ಕೇಂದ್ರಗಳಲ್ಲಿ ಮರಾಠಿಯಲ್ಲಿ ಮಾಹಿತಿ ನೀಡುವ ಅವಶ್ಯಕತೆ ಏನಿದೆ? ಮಹಾರಾಷ್ಟ್ರದೆಲ್ಲೆಡೆ ಕನ್ನಡ ಮಾತಾಡುವ ಅಸಂಖ್ಯಾತ ಜನರಿದ್ದಾರೆ. ಅವರಿಗೆ ಮಾಹಿತಿಯನ್ನು ಅಲ್ಲಿನ ಸರ್ಕಾರ ಕನ್ನಡದಲ್ಲಿ ನೀಡುತ್ತದೆಯೇ? ಎಂದು ಜನ ಪ್ರಶ್ನಿಸಿದ್ದಾರೆ
ಬೆಳಗಾವಿಯಲ್ಲಿ ಮರಾಠಿ ಮಾತಾಡುವ ಜನ ದಶಕಗಳಿಂದ ವಾಸವಾಗಿದ್ದಾರೆ. ಅವರು ಯಾಕೆ ಇನ್ನೂ ಕನ್ನಡ ಕಲಿತಿಲ್ಲ? ಕರ್ನಾಟಕದಲ್ಲಿ ಮರಾಠಿ ಮಾಧ್ಯಮದಲ್ಲಿ ಓದುವ ಮಕ್ಕಳು ಎರಡನೇ ಭಾಷೆಯಾಗಿ ಕನ್ನಡ ಓದಿರುತ್ತಾರೆ. ಬೆಳಗಾವಿಯಲ್ಲಿ ಮರಾಠಿ ಮಾತಾಡುವ ಕುಟುಂಬಗಳಿಗೆ ಕನ್ನಡ ಚೆನ್ನಾಗಿ ಗೊತ್ತು. ಅಂಜಲಿಯವರ ಮಾತು ಕೇಳಿ ಕನ್ನಡ ಕಲಿತವರೂ ಅದರಲ್ಲಿ ಮಾತಾಡದಿರಲು ನಿರ್ಧರಿಸುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಆಕ್ರೋಷ ವ್ಯಕ್ತವಾಗಿದೆ.
ಇದನ್ನೂ ಓದಿ: ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ ಆಗಿಲ್ಲ; ಅಂಜಲಿ ನಿಂಬಾಳ್ಕರ್, ಯತ್ನಾಳ್, ಶಿವಲಿಂಗೇಗೌಡ ಬೇಸರ