AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಿ ಜನಪ್ರತಿನಿಧಿಗಳಿಗೆ ಪಾಠ ಕಲಿಸಲು ನಿರ್ಧರಿಸಿದರು ಹೇರಡಿಕೆ ಗ್ರಾಮಸ್ಥರು!

ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಿ ಜನಪ್ರತಿನಿಧಿಗಳಿಗೆ ಪಾಠ ಕಲಿಸಲು ನಿರ್ಧರಿಸಿದರು ಹೇರಡಿಕೆ ಗ್ರಾಮಸ್ಥರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jan 31, 2022 | 10:50 PM

Share

ರಸ್ತೆ ಮಾತ್ರ ಅಂತಲ್ಲ. ಈ ಊರಿಗೆ ಎಲ್ಲ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಒಂದು ಅಂಗನವಾಡಿ ಕೇಂದ್ರವೂ ಇಲ್ಲಿಲ್ಲ ಅಂದರೆ, ರಾಜಕಾರಣಿಗಳು ಮುಗ್ಧ ಜನರನ್ನು ಯಾವಮಟ್ಟಿಗೆ ಶೋಷಿಸಿದ್ದಾರೆ ಅಂತ ಗಮನಿಸಿ. ಸಮುದಾಯ ಭವನ ಬೇಕೆಂಬ ಬೇಡಿಕೆಯೂ ಇವರದ್ದಾಗಿದೆ.

ಈ ಜನರನ್ನು ನೋಡಿ. ಇವರಲ್ಲಿ ಎಷ್ಟು ಜನ ಶಿಕ್ಷಿತರೋ (literate), ಎಷ್ಟು ಜನ ಕಡಿಮೆ ಓದಿನವರೋ ಅಂತ ನಮಗೆ ಗೊತ್ತಿಲ್ಲ ಮಾರಾಯ್ರೇ. ಅದರೆ ಗೊತ್ತಿರೋದು ಏನು ಅಂದರೆ ಅಪಾರವಾಗಿ ಓದಿಕೊಂಡವರು ಮಾಡದ ಕೆಲಸವನ್ನು ಇವರು ಮಾಡಿದ್ದಾರೆ. ಅಂದಹಾಗೆ ಪ್ರತಿಭಟನೆಯ ಮೂಲಕ ಮತದಾನ ಬಹಿಷ್ಕರಿಸಿರುವುದಾಗಿ ಹೇಳುತ್ತಿರುವ ಇವರೆಲ್ಲ ಚಿಕ್ಕಮಗಳೂರು (Chikkamagalur) ಜಿಲ್ಲೆ ಕಳಸಾ (Kalasa) ತಾಲ್ಲೂಕಿನ ಹೇರಡಿಕೆ (Heradike) ಗ್ರಾಮದವರು. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಿ ಅಂತ ಇವರು ತಮ್ಮನ್ನು ಪ್ರತಿನಿಧಿಸುವ ಪ್ರತಿನಿಧಿಗಳಿಗೆ ವರ್ಷಗಳಿಂದ ಹೇಳುತ್ತಿದ್ದಾರಂತೆ. ಆದರೆ ಅದು ಯಾವ ನಾಯಕನ ಕಿವಿಗೂ ಬೀಳುತ್ತಿಲ್ಲವಂತೆ. ಹಾಗಾಗೇ ಬಹಿಷ್ಕಾರ್ ನಿರ್ಧಾರ. ಈ ಊರಲ್ಲದೆ ಕಾರಗದ್ದೆ, ಭಟ್ರಮಕ್ಕಿ, ಕೈಮರ ಮತ್ತು ಗಾಳಿಗುಂಡಿ ಗ್ರಾಮಗಳನ್ನು ತಾಲ್ಲೂಕು ಕೇಂದ್ರ ಕಳಸಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ನೋಡಿ. ಯಾವುದೋ ಜಮಾನಾನಲ್ಲಿ ಹಾಕಿದ ಕಚ್ಚಾ ರಸ್ತೆ ಇದು. ದುರಸ್ತಿ ಕಾಣುವ ಬಾಗ್ಯವಂತೂ ರಸ್ತೆಗಿಲ್ಲ. ಪ್ರತಿ ಚುನಾವಣೆಯಲ್ಲಿ ವೋಟು ಕೇಳಿ ಬರುವ ನಾಯಕರು ಗೆದ್ದ ಕೂಡಲೇ ದುರಸ್ತಿ ಮಾಡುವ ಭರವಸೆ ನೀಡಿ ಮತ್ತೊಂದು ಚುನಾವಣೆ ಬಂದಾಗಲೇ ಇವರ ಮುಂದೆ ಲಜ್ಜಾಹೀನರಾಗಿ ಬಂದು ಮತ ಭಿಕ್ಷೆ ಕೇಳುತ್ತಾರೆ. ಅವರ ಪೊಳ್ಳು ಭರವಸೆ ಮತ್ತು ಸುಳ್ಳು ಆಶ್ವಾಸನೆಗಳಿಂದ ಬೇಸತ್ತಿರುವ ಜನ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಿದ್ದಾರೆ.

ರಸ್ತೆ ಮಾತ್ರ ಅಂತಲ್ಲ. ಈ ಊರಿಗೆ ಎಲ್ಲ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಒಂದು ಅಂಗನವಾಡಿ ಕೇಂದ್ರವೂ ಇಲ್ಲಿಲ್ಲ ಅಂದರೆ, ರಾಜಕಾರಣಿಗಳು ಮುಗ್ಧ ಜನರನ್ನು ಯಾವಮಟ್ಟಿಗೆ ಶೋಷಿಸಿದ್ದಾರೆ ಅಂತ ಗಮನಿಸಿ. ಸಮುದಾಯ ಭವನ ಬೇಕೆಂಬ ಬೇಡಿಕೆಯೂ ಇವರದ್ದಾಗಿದೆ.

ಈ ಮಹಿಳೆ ಹೇಳುವ ಮಾತನ್ನು ಸ್ವಲ್ಪ ಗಮನಿಸಿ. ಮನೆಗೆ ಬೇಕಾಗುವ ಪದಾರ್ಥಗಳನ್ನು ತರಲು ಇವರು ಕಳಸಕ್ಕೆ ಹೋಗಬೇಕು. ಒಂದಷ್ಟು ಆಟೋಗಳು ಇಲ್ಲಿ ಓಡಾಡುತ್ತವೆ. ಆದರೆ. ಅವರಿಗೆ ಒನ್ ವೇ ಇವರು ರೂ. 450 ಕೊಡಬೇಕು!

ಯಾವುದೇ ಮೂಲಭೂತ ಸೌಕರ್ಯವಿಲ್ಲದ ಊರಿನ ಜನ ಕೇವಲ 10-15 ಕಿಮೀ ದೂರವಿರುವ ತಾಲ್ಲೂಕು ಕೇಂದ್ರಕ್ಕೆ ಹೋಗಿಬರಲು ರೂ. 900 ಎಲ್ಲಿಂದ ಕೊಟ್ಟಾರು?

ಇದನ್ನೂ ಓದಿ:  ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ! ಚಿಕ್ಕಮಗಳೂರು ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಅರೆಸ್ಟ್