ಜನರು ಯಾರಿಗಾದರೂ ವೋಟು ನೀಡಲಿ ಅದರೆ ಊರುಗಳನ್ನು ನೆಮ್ಮದಿಯಿಂದಿರಲು ಬಿಡಿ: ಹೆಚ್ ಡಿ ರೇವಣ್ಣ, ಶಾಸಕ
ಕಾಮಸಮುದ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ರಾಜಕೀಯ ಹಗೆತನ ಹೆಚ್ಚುತ್ತಿದೆ. ಜನ ಯಾರಿಗೆ ವೋಟು ಹಾಕುತ್ತಾರೆ ಅನ್ನೋದು ಮುಖ್ಯವಲ್ಲ, ಅದು ಅವರ ವೈಯಕ್ತಿಕ ವಿಚಾರ, ಅದರೆ ಊರು ನೆಮ್ಮದಿಯಾಗಿರಬೇಕು, ಶಾಂತಿ ನೆಲೆಸಿರಬೇಕು, ಗಲಭೆಗಳಿಗೆ ಅವಕಾಶ ನೀಡಬಾರದೆಂದು ರೇವಣ್ಣ ಪೊಲೀಸರಿಗೆ ತಾಕೀತು ಮಾಡಿದರು. ರಾಜಕಾರಣ ಬೇರೆ ಜನರ ಬದುಕೇ ಬೇರೆ ಎಂದು ಶಾಸಕ ಹೇಳಿದರು.
ಹಾಸನ: ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಮತ್ತು ಜಿಲ್ಲೆಯ ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ನಡುವೆ ತೆರೆಮರೆಯ ಕಾಳಗ ಮುಂದುವರಿದಿದೆ. ಹೊಳೆನರಸೀಪುರ ತಾಲ್ಲೂಕಿನ ಕಾಮಸುದ್ರದಲ್ಲಿ ಮಾವಿನಕೆರೆ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ರೇವಣ್ಣ, ಸಂಸದನ ಮೇಲೆ ಪರೋಕ್ಷ ದಾಳಿ ನಡೆಸಿದರು. 30 ವರ್ಷಗಳಿಂದ ಶಾಸಕನಾಗಿರುವ ತನ್ನ ರಾಜಕೀಯ ಭವಿಷ್ಯ ಮುಗಿಯಿತು ಅಂತ ಕೆಲವರು ಭಾವಿಸಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ತೊಂದರೆ ನೀಡುವ ಕೆಲಸ ಮಾಡುತ್ತಿದ್ದಾರೆ, ಅದರೆ ಪಕ್ಷದ ಕಾರ್ಯಕರ್ತರು ಯಾರಿಗೂ ಹೆದರುವ ಅವಶ್ಯಕತೆಯಿಲ್ಲವೆಂದು ರೇವಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡಿದರೆ ನಾವು ಹೆದರಲ್ಲ: ಹೆಚ್ ಡಿ ರೇವಣ್ಣ