ಹರ್ಷ ಕೊಲೆಯಾದರೆ ಒಂದು ನ್ಯಾಯ ಸಮೀರ್ ಕೊಲೆಯಾದರೆ ಮತ್ತೊಂದು ನ್ಯಾಯ ಯಾಕೆ? ಸಿದ್ದರಾಮಯ್ಯ
ಇತ್ತೀಚಿಗೆ ಬೆಳ್ತಂಗಡಿಯಲ್ಲಿ ಬಜರಂಗದಳದ ಕಾರ್ಯಕರ್ತನೊಬ್ಬನಿಂದ ಮರಾಠಾ ಎಸ್ ಟಿ ಸಮುದಾಯಕ್ಕೆ ಸೇರಿದ ದಿನೇಶ್ ಹೆಸರಿನ ವ್ಯಕ್ತಿಯ ಕೊಲೆಯಾಯಿತು. ಅವನ ಕುಟುಂಬಕ್ಕೂ ಸರ್ಕಾರ ಪರಿಹಾರ ನೀಡಿಲ್ಲ. ಹಿಂದೂ ಕುಟುಂಬಗಳಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿ: ಬುಧವಾರ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮದವರೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಸರ್ಕಾರದ ದ್ವಂದ್ವ ನೀತಿಯನ್ನು (double standards) ತರಾಟೆಗೆ ತೆಗೆದುಕೊಂಡರು. ಬಿಜೆಪಿ ಸರ್ಕಾರ ಸಾವುಗಳ ಮೇಲೂ ರಾಜಕೀಯ ಮಾಡುತ್ತಿದೆ, ಸತ್ತವನು ಅಥವಾ ಕೊಲೆಯಾದವನು ಯಾವ ಸಮುದಾಯದವನಾದರೇನು ಸಾವು ಸಾವೇ. ಹಿಂದೂ ಸತ್ತರೆ ಬೇರೆ, ಮುಸಲ್ಮಾನ ಅಥವಾ ಒಬ್ಬ ಕ್ರಿಶ್ಚಿಯನ್ ಸತ್ತರೆ ಬೇರೆ ಅಂತಿರುತ್ತಾ? ನಾವೆಲ್ಲ ಮಾನವ ಜೀವಿಗಳು ಅನ್ನೋದು ಬಿಜೆಪಿಯವರಿಗೆ ಯಾಕೆ ಅರ್ಥವಾಗಲ್ಲ ಅಂತ ಸಿದ್ದರಾಮಯ್ಯ ಕೇಳಿದರು. ಜನೆವರಿ ತಿಂಗಳು ನರಗುಂದದಲ್ಲಿ ಬಜರಂಗ ದಳದ ಕಾರ್ಯಕರ್ತನಿಂದ ಕೊಲೆಯಾದ ಸಮೀರ್ ಹೆಸರಿನ ಮುಸ್ಲಿಂ ಯುವಕನ ಕುಟುಂಬಕ್ಕೆ ಸರ್ಕಾರ ಒಂದು ನಯಾಪೈಸೆಯನ್ನೂ ಪರಿಹಾರ ನೀಡಿಲ್ಲ, ಯಾಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇತ್ತೀಚಿಗೆ ಬೆಳ್ತಂಗಡಿಯಲ್ಲಿ ಬಜರಂಗದಳದ ಕಾರ್ಯಕರ್ತನೊಬ್ಬನಿಂದ ಮರಾಠಾ ಎಸ್ ಟಿ ಸಮುದಾಯಕ್ಕೆ ಸೇರಿದ ದಿನೇಶ್ ಹೆಸರಿನ ವ್ಯಕ್ತಿಯ ಕೊಲೆಯಾಯಿತು. ಅವನ ಕುಟುಂಬಕ್ಕೂ ಸರ್ಕಾರ ಪರಿಹಾರ ನೀಡಿಲ್ಲ. ಹಿಂದೂ ಕುಟುಂಬಗಳಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಹರ್ಷನ ಕೊಲೆ ಸಹ ತಪ್ಪೇ. ಅವನನ್ನು ಕೊಂದವರನ್ನು ಯಾವ ಶಿಕ್ಷೆಗೆ ಬೇಕಾದರೂ ಒಳಪಡಿಸಲಿ, ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಅವನ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡುತ್ತದೆ, ಬೇರೆಯವರಿಗೆ ಒಂದು ರೂಪಾಯಿ ಸಹ ನೀಡಲ್ಲ. ಯಾಹೆ ಹೀಗೆ? ಭಾರತೀಯ ಸಂವಿಧಾನದ 14 ನೇ ಕಲಮ್ಮಿನ ಪ್ರಕಾರ equality before law, equal protection of law, ಸಕಾರ ಅದನ್ನು ಪಾಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಹಿಂದೂ ಯುವಕನೊಬ್ಬನ ಕೊಲೆಯಾದರೆ ಸಿದ್ದರಾಮಯ್ಯನವರ ಬಾಯಲ್ಲಿ ಒಂದು ಸಂತಾಪದ ಮಾತು ಕೂಡ ಬರಲ್ಲ: ಸಿಟಿ ರವಿ