ಆರ್ ಅಶೋಕ ಗೃಹ ಸಚಿವನಾಗಿದ್ದಾಗ ಕರಸೇವಕರ ಪ್ರಕರಣಗಳು ನೆನಪಾಗಲಿಲ್ಲವೇ? ಜಗದೀಶ್ ಶೆಟ್ಟರ್, ಎಮ್ಮೆಲ್ಸಿ

|

Updated on: Jan 05, 2024 | 4:35 PM

ಬಿಜೆಪಿ ನಾಯಕರು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಕೈವಾಡ ಮತ್ತು ಕುಮ್ಮಕ್ಕಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಲೋಕ ಸಭಾ ಚುನಾವಣೆ ಹತ್ತಿದ ಬಂದಾಗಲೆಲ್ಲ ಅವರು ಇಂಥ ವಿಷಯಗಳನ್ನು ಮುನ್ನೆಲೆಗೆ ತಂದು ಹಿಂದೂ ವೋಟುಗಳನ್ನು ಸೆಳೆಯುವ ಪ್ರಯತ್ನ ಅವರು ಮಾಡುತ್ತಾರೆ ಎಂದು ಶೆಟ್ಟರ್ ನೇರವಾಗಿ ಆರೋಪಿಸಿದರು.

ಹುಬ್ಬಳ್ಳಿ: ಕರಸೇವಕರ (karsevak) ಬಂಧನ ಖಂಡಿಸಿ ರಾಜ್ಯದಾದ್ಯಂತ ನಡೆಸುತ್ತ್ತಿರುವ ಬಿಜೆಪಿ ನಾಯಕರು ಕೇವಲ ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ, ಅವರಿಗೆ ರಾಮಭಕ್ತರ ಬಗ್ಗೆ ಅನುಕಂಪ, ಕಾಳಜಿ ಇಲ್ಲವೇ ಇಲ್ಲ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ (MLC) ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು. ಹುಬ್ಬಳ್ಳಿಯ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನದಿಗಳೊಂದಿಗೆ ಮಾತಾಡಿದ ಅವರು, ಶ್ರೀಕಾಂತ್ ಪೂಜಾರಿಯ ನಂತರವೇ ಬಿಜೆಪಿ ನಾಯಕರಿಗೆ ಕರಸೇವಕರ ನೆನಪಾಗಿದೆಯೇ? ಕಳೆದ 30 ವರ್ಷಗಳ ಅವಧಿಯಲ್ಲಿ ಬಿಜೆಪಿ ಸುಮಾರು 7-8 ವರ್ಷಗಳ ಕಾಲ ಅಧಿಕಾರ ನಡೆಸಿತಲ್ಲ? ಅಬ್ಬರದ ಹೇಳಿಕೆ ನೀಡುತ್ತಿರುವ ಆರ್ ಅಶೋಕ ಖುದ್ದು 5 ವರ್ಷಗಳ ಕಾಲ ಗೃಹಸಚಿವರಾಗಿದ್ದರಲ್ಲ? ಆಗ ಅವರಿಗೆ ಕರಸೇವಕರ ಮೇಲಿದ್ದ ಪ್ರಕರಣಗಳು ನೆನಪಾಗಲಿಲ್ಲವೇ? ಕರಸೇವಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಅವರು ಯಾಕೆ ಪ್ರಯತ್ನಿಸಲಿಲ್ಲ ಎಂದು ಶೆಟ್ಟರ್ ಖಾರವಾಗಿ ಪ್ರಶ್ನಿಸಿದರು. ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪ, ಸದಾನಂದಗೌಡ, ಬಸವರಾಜ ಬೊಮ್ಮಾಯಿ ಯಾಕೆ ಸುಮ್ಮನಿದ್ದರು ಎಂದು ಶೆಟ್ಟರ್ ಕೇಳಿದರು. ಲೋಕಸಭಾ ಚುನಾವಣೆಯಲ್ಲಿ ಹಿಂದೂಗಳ ವೋಟು ಗಿಟ್ಟಿಸಲು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ ಎಂದ ಅವರು ತಾನು ಕೇವಲ 10 ತಿಂಗಳು ಅವಧಿಗೆ ಮಾತ್ರ ಸಿಎಂ ಆಗಿದ್ದರೂ, ಕರಸೇವಕರಿಗಾಗಿ ತಾನು ಮಾಡಿದ ಪ್ರಯತ್ನಗಳು ದಾಖಲೆಯಲ್ಲಿವೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ