ರಾಜಣ್ಣ ಏನಾದರೂ ಹೇಳಿದ್ದರೆ ತಾನ್ಯಾಕೆ ಅದಕ್ಕೆ ಪ್ರತಿಕ್ರಿಯೆ ನೀಡಬೇಕು? ಜಿ ಪರಮೇಶ್ವರ್, ಗೃಹ ಸಚಿವ
ತಾವು ಕರೆದಿದ್ದ ಸಭೆ ರದ್ದಾಗಿರುವುದಕ್ಕೆ ಪರಮೇಶ್ವರ್ ಅವರಿಗೆ ಬೇಸರ ಇರೋದು ನಿಜವಾದರೂ ಅದನ್ನು ತೋರಿಸಿಕೊಳ್ಳುತ್ತಿಲ್ಲ. ತಮ್ಮ ಪಕ್ಷದಲ್ಲಿ ಹೈಕಮಾಂಡ್ ಮಾತೇ ಅಂತಿಮ, ಅಲ್ಲಿಂದ ಆದೇಶ ಬಂದರೆ ಎಲ್ಲರೂ ಪಾಲಿಸಲೇಬೇಕು, ಅವರು ಸಭೆ ನಡೆಸುವುದು ಸದ್ಯಕ್ಕೆ ಬೇಡ ಅಂತ ಹೇಳಿದ್ದಾರೆ, ತಾವು ಅದನ್ನು ಮುಂದೂಡಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ತನಗೆ ಮಾಹಿತಿ ಇಲ್ಲ, ದೆಹಲಿಯ ವರಿಷ್ಠ ನಾಯಕರಿಂದಾಗಲೀ ಅಥವಾ ಸ್ಥಳೀಯ ನಾಯಕತ್ವದಿಂದಾಗಲೀ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಡಿಕೆ ಶಿವಕುಮಾರ್ ಅವರು ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಲು ತವಕಿಸುವುದೇಕೆ? 2028ರಲ್ಲಿ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಲಿ ಎಂದು ಕೆಎನ್ ರಾಜಣ್ಣ ಹೇಳಿರುವುದನ್ನು ಅವರ ಗಮನಕ್ಕೆ ತಂದಾಗ, ಅವರು ಏನು ಹೇಳಿದ್ದಾರೋ ಗೊತ್ತಿಲ್ಲ, ಅವರು ಹಾಗೆ ಹೇಳಿದ್ದರೆ ಅವರನ್ನೇ ಕೇಳಿ, ಅವರು ಹೇಳಿರುವುದಕ್ಕೆ ತಾನ್ಯಾಕೆ ಪ್ರತಿಕ್ರಿಯೆ ನೀಡಬೇಕು ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾನು ಯಾವತ್ತೂ ಸೈಡ್ಲೈನ್ ಆಗಿಲ್ಲ, ಪರಮೇಶ್ವರ್ ಕರೆದಿದ್ದ ಸಭೆ ಪೋಸ್ಟ್ಪೋನ್ ಆಗಿದೆ, ರದ್ದಾಗಿಲ್ಲ: ಸತೀಶ್ ಜಾರಕಿಹೊಳಿ