Loading video

ಶಾಸಕರಿಗೆ ₹ 50 ಕೋಟಿ ಆಫರ್ ವಿಷಯ ಸಿದ್ದರಾಮಯ್ಯ ಇದುವರೆಗೆ ಯಾಕೆ ಮುಚ್ಚಿಟ್ಟಿದ್ದರು? ಕುಮಾರಸ್ವಾಮಿ

Updated on: Nov 15, 2024 | 3:23 PM

ಸಿದ್ದರಾಮಯ್ಯ ಸರ್ಕಾರಕ್ಕೆ ಸದ್ಯಕ್ಕೇನೂ ಸಮಸ್ಯೆ ಇಲ್ಲ, ಅದಕ್ಕಿನ್ನೂ ಟೈಮಿದೆ, ಯಾಕೆಂದರೆ ಅವರೇ ಹೇಳಿದ್ದಾರಲ್ಲ? ತಮ್ಮನ್ನು ಮುಟ್ಟಿದರೆ ಜನ ದಂಗೆಯೇಳುತ್ತಾರೆ ಅಂತ, ಜನ ಇವರನ್ನು ಆರಾಧಿಸುತ್ತಾರೆಯೇ? ಸರ್ಕಾರದಿದ ಒಂದಾದ ಮೇಲೊಂದು ಹಗರಣ ನಡೆಯುತ್ತಿರುವುದಕ್ಕೆ ಜನ ಸಿದ್ದರಾಮಯ್ಯರನ್ನು ಆರಾಧಿಸಬೇಕೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮೈಸೂರು: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ತಮ್ಮ 50 ಶಾಸಕರಿಗೆ ತಲಾ 50 ಕೋಟಿ ರೂ. ಕೊಟ್ಟು ಖರೀದಿಸುವ ಪ್ರಯತ್ನ ನಡೆದಿದೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಷ್ಟು ದಿನ ಯಾಕೆ ಸುಮ್ಮನಿದ್ದರು? ಖರೀದಿ ವ್ಯವಹಾರ ಯಾವಾಗಿಂದ ಶುರುವಾಗಿದೆ? ಕಾಂಗ್ರೆಸ್ ಶಾಸಕರಿಗೆ ಆಮಿಶವೊಡ್ಡಿದವರು ಯಾರು? ಮೊದಲಾದ ಸಂಗತಿಗಳನ್ನು ಯಾಕೆ ಹೇಳುತ್ತಿಲ್ಲ, ಅವರು ಹೀಗೆಲ್ಲ ಮಾತಾಡುತ್ತಿದ್ದರೆ ಜನ ತಲೆಕೆಟ್ಟಿದೆ ಅಂದುಕೊಳ್ಳುತ್ತಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್​: ಕುಮಾರಸ್ವಾಮಿ ಶಾಕಿಂಗ್​ ಹೇಳಿಕೆ