Loading video

ಜಾತಿ ಗಣತಿ ಸಮೀಕ್ಷೆ ಮಾಡಿಸಲು ಕಾಂಗ್ರೆಸ್ ಪ್ರಧಾನಿಗಳು ಯಾಕೆ ಹಣ ಬಿಡುಗಡೆ ಮಾಡಲಿಲ್ಲ? ಆರ್ ಅಶೋಕ

Updated on: May 01, 2025 | 2:36 PM

ರಾಜ್ಯ ಸರ್ಕಾರ 2015ರಲ್ಲಿ ಮಾಡಿಸಿದ ಜಾತಿ ಸಮೀಕ್ಷೆ ಹೇಗಿತ್ತು ಅಂತ ಚೆನ್ನಾಗಿ ಗೊತ್ತಿದೆ, ಆ ಸಮೀಕ್ಷಾ ವರದಿಯ ಮೇಲೆ ಸಹಿ ಇರಲಿಲ್ಲ ಮತ್ತು ವರದಿಯ ಮೂಲಪ್ರತಿ ನಾಪತ್ತೆಯಾಗಿತ್ತು! ಇದನ್ನು ತಾನು ಅರೋಪ ಮಾಡಲು ಹೇಳುತ್ತಿಲ್ಲ, ಸಮೀಕ್ಷೆ ನಡೆಸಿದ ಆಯೋಗದ ಅಧ್ಯಕ್ಷರು ಬರೆದ ಪತ್ರವನ್ನು ಆಧಾರವಾಗಿಟ್ಟುಕೊಂಡು ಹೇಳುತ್ತಿದ್ದೇನೆ, ಇಂಥ ಸಮೀಕ್ಷೆಯನ್ನು ಪಿಎಂ ಮೋದಿ ಮಾಡಿಸಬೇಕಾ ಎಂದು ಅಶೋಕ ಪ್ರಶ್ನಿಸಿದರು.

ಬೆಂಗಳೂರು, ಮೇ 1: ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ, ಜಾತಿ ಗಣತಿ ಮಾಡಿಸಲು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಹಣ ಬಿಡುಗಡೆ ಮಾಡಬೇಕು ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ, ಆದರೆ ಹಿಂದೆ ಪ್ರಧಾನ ಮಂತ್ರಿಗಳಾಗಿದ್ದ ಮನಮೋಹನ ಸಿಂಗ್, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮೊದಲಾದವರೆಲ್ಲ ಯಾಕೆ ಹಣ ಬಿಡುಗಡೆ ಮಾಡಿಲ್ಲ, ಯಾಕೆ ಸಮೀಕ್ಷೆ ಮಾಡಿಸಿಲ್ಲ ಎಂದು ಕೇಳಿದರು. 1931 ರಿಂದ ದಶಕಗಳ ಕಾಲ ಜಾತಿ ಸಮೀಕ್ಷೆ ಮಾಡಿಸದ ಕಾಂಗ್ರೆಸ್ಸಿಗರು ಈಗ ಪ್ರಧಾನಿ ಮೋದಿಯವರು ಮಾಡಿಸುತ್ತೇನೆ ಅಂದಾಕ್ಷಣ ಒಂದಾದ ಮೇಲೆ ಒಂದರಂತೆ ಷರತ್ತುಗಳನ್ನು ಮುಂದಿಡುತ್ತಿದ್ದಾರೆ, ಅವರಿಗೆ ನಾಚಿಕೆಯಾಗಬೇಕು ಎಂದು ಅಶೋಕ ಹೇಳಿದರು.

ಇದನ್ನೂ ಓದಿ: ದೇಶ ಕಾಯುವ ಸೈನಿಕನೇ ಪರಮೋಚ್ಛ, ಆದರೆ ಕಾಂಗ್ರೆಸ್ ಸೈನಿಕರ ಮನೋಬಲ ಕುಗ್ಗಿಸುತ್ತಿದೆ: ಆರ್ ಅಶೋಕ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ