ಸಿಟಿ ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ

|

Updated on: Dec 20, 2024 | 12:25 PM

ಬಿಜೆಪಿ ಎಂಎಲ್​ಸಿ ಸಿಟಿ ರವಿಗೆ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ತಲೆಯಲ್ಲಿ ರಕ್ತ ಬರುವ ಹಾಗೆ ಗಾಯವಾಗಿದ್ದು ಹೇಗೆ ಎಂಬುದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಉತ್ತರಿಸಿದ್ದಾರೆ. ಅವರು ಹೇಳಿದ್ದೇನು? ಪ್ರಕರಣದ ಬಗ್ಗೆ ಅವರ ಅಭಿಪ್ರಾಯವೇನು? ಎಲ್ಲ ವಿವರ ಇಲ್ಲಿದೆ.

ಬೆಂಗಳೂರು, ಡಿಸೆಂಬರ್ 20: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಬಿಜೆಪಿ ಎಂಎಲ್​ಸಿ ಸಿಟಿ ರವಿ ಅವರನ್ನು ಪೊಲೀಸರು ಇಡೀ ರಾತ್ರಿ ಸುತ್ತಾಟ ಮಾಡಿಸಿದ ವಿಚಾರ ಗೊತ್ತಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು. ಘಟನೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಹಿರೇಭಾಗೆವಾಡಿ ಸ್ಟೇಷನ್‌ಗೆ ಕರೆದುಕೊಂಡು ಹೋದಾಗ ಅಲ್ಲಿಗೆ ಬಿಜೆಪಿ ನಾಯಕರು ಹೋಗಿದ್ದಾರೆ. ಹೊರಗೆ ಸುತ್ತಾಡಿಸಿರೋದು ಗೊತ್ತಿಲ್ಲ. ಪೊಲೀಸರು ಎಲ್ಲವನ್ನೂ ಕೇಳಿಯೇ ಮಾಡಲ್ಲ. ಸಿಎಂ‌ ಆಗಲಿ, ನಾನಾಗಲಿ ಯಾವುದೇ ಸೂಚನೆ ಕೊಟ್ಟಿಲ್ಲ. ಪ್ರೊಸೀಜರ್ ಹೀಗೇ ಮಾಡಬೇಕು ಅಂತ ಹೇಳಿಲ್ಲ ಎಂದರು.

ಖಾನಾಪುರ ಸ್ಟೇಷನ್‌ನಲ್ಲಿ ಇದ್ದಾಗಲೇ ಸಿಟಿ ರವಿ ತಲೆಯಲ್ಲಿ ರಕ್ತ ಬಂದಿರುವ ವಿಚಾರ ನನಗೆ ಗೊತ್ತಿಲ್ಲ. ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಸಂಬಂಧಿಸಿದ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ ಎಂದರು. ಇದು ಕಾನ್ಫಿಡೆನ್ಸ್ ವಿಚಾರ ಎಂದ ಪರಮೇಶ್ವರ್ ಇನ್ನೂ ಏನೇನೆಂದರು ಎಂಬ ವಿಡಿಯೋ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ