ಕಬ್ಬು ತುಂಬಿದ್ದ ಲಾರಿ ಅಡ್ಡಗಟ್ಟಿದ ಗಜಪಡೆ, ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ! ವಾಹನ ಸವಾರರು ಕಂಗಾಲು
ಚಾಮರಾಜನಗರ-ತಮಿಳುನಾಡು ಗಡಿ ಸಮೀಪದ ಆಸನೂರು ಬಳಿ ಕಾಡಾನೆಗಳ ಹಿಂಡು ಕಬ್ಬು ತುಂಬಿದ ಲಾರಿಯನ್ನು ಅಡ್ಡಗಟ್ಟಿದೆ. ಇದೇ ವೇಳೆ ಬೃಹತ್ ಚಿರತೆಯೊಂದು ರಾಷ್ಟ್ರೀಯ ಹೆದ್ದಾರಿ ದಾಟಿದ್ದು, ಏಕಾಏಕಿ ಕಂಡುಬಂದ ಆನೆ ಹಾಗೂ ಚಿರತೆ ಓಡಾಟ ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ. ಸದ್ಯ ಈ ದೃಶ್ಯ ವಾಹನ ಸವಾರರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಾಮರಾಜನಗರ, ಸೆಪ್ಟೆಂಬರ್ 28: ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಲಾರಿಯನ್ನು ಕಾಡಾನೆಗಳ ಹಿಂಡು ಅಡ್ಡಗಟ್ಟಿದ ಘಟನೆ ಚಾಮರಾಜನಗರ-ತಮಿಳುನಾಡು ಗಡಿ ಸಮೀಪದ ಆಸನೂರು ಬಳಿ ನಡೆದಿದೆ. ಇದೇ ವೇಳೆ ಬೃಹತ್ ಚಿರತೆಯೊಂದು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿದ್ದು, ಒಂದೇ ಸಂದರ್ಭದಲ್ಲಿ ಆನೆ ಹಾಗೂ ಚಿರತೆ ಕಾಣಿಸಿಕೊಂಡು ವಾಹನ ಸವಾರರು ಆತಂಕಗೊಂಡಿದ್ದಾರೆ. ಕಾಡಾನೆಗಳ ಹಿಂಡು ಕಬ್ಬು ತುಂಬಿದ ಲಾರಿಯನ್ನು ತಡೆದ ಹಿನ್ನೆಲೆಯಲ್ಲಿ ಚಾಲಕ ಕೆಲಕಾಲ ವಾಹನ ನಿಲ್ಲಿಸಿದ್ದರು. ಇದೇ ವೇಳೆ ಚಿರತೆಯೊಂದು ರಸ್ತೆ ದಾಟಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾಡಾನೆಗಳು ಹಾಗೂ ಚಿರತೆಗಳ ಓಡಾಟ ಕಂಡು ವಾಹನ ಸವಾರರು ಆತಂಕಗೊಂಡಿದ್ದಾರೆ. ಆನೆಗಳ ಹಿಂಡು ಲಾರಿಯನ್ನು ಅಡ್ಡಗಟ್ಟುವುದು ಹಾಗೂ ಚಿರತೆ ರಸ್ತೆ ದಾಟುವ ದೃಶ್ಯವನ್ನು ಕೆಲವರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಆನೆಗಳು ಮತ್ತು ಚಿರತೆ ಒಂದೇ ವೇಳೆ ಹೆದ್ದಾರಿ ಸಮೀಪ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಹಾಗೂ ವಾಹನ ಸವಾರರಲ್ಲಿ ಕುತೂಹಲದ ಜೊತೆಗೆ ಆತಂಕ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ